Sunday, June 7, 2026
spot_imgspot_img
spot_imgspot_img

108 ಅಡಿ ಉದ್ದವಿರುವ ಬೃಹದಾಕಾರದ ಅಗರಬತ್ತಿ ; ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರಿಂದ ವಿಶೇಷ ಉಡುಗೊರೆ…..!

- Advertisement -
- Advertisement -

ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ರಾಮಮಂದಿರ ಉದ್ಘಾಟನೆಗಾಗಿ ಸಕಲ ಸಿದ್ಧತೆಗಳು ನಡೀತಿದೆ. ಇನ್ನು ಭಕ್ತರು ತಮ್ಮ ಕಡೆಯಿಂದ ರಾಮಮಂದಿರಕ್ಕೆ ವಿಶೇಷ ಉಡುಗೊರೆಗಳನ್ನು ಕೊಡೋದಕ್ಕೆ ರೆಡಿ ಮಾಡಿಕೊಂಡಿದ್ದಾರೆ.

ಗುಜರಾತ್‌ನ ವಡೋದರದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕಾಗಿ ವಿಶೇಷವಾದ ಬೃಹದಾಕಾರದ ಅಗರಬತ್ತಿ ತಯಾರಿಸಲಾಗುತ್ತಿದೆ. ಈ ಅಗರಬತ್ತಿಯನ್ನು ರಾಮಮಂದಿರದ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಗೆ ಕಳುಹಿಸಲಾಗುತ್ತದೆ.

ಈ ಅಗರಬತ್ತಿ 108 ಅಡಿ ಉದ್ದವಿದೆ. ಅಲ್ಲದೇ ಇದು 3,428 ಕಿಲೋ ತೂಕವಿದೆ. ಇದನ್ನು 10ಕ್ಕೂ ಹೆಚ್ಚು ಕಬ್ಬಿಣದ ಟ್ರೈಪಾಡ್ ಸ್ಟ್ಯಾಂಡ್ ಅಳವಡಿಸಿ ಅವುಗಳ ಮೇಲೆ ಅಗರಬತ್ತಿ ತಯಾರಿಸಲಾಗುತ್ತಿದೆ.

- Advertisement -

Related news

error: Content is protected !!