Wednesday, June 24, 2026
spot_imgspot_img
spot_imgspot_img

ಡ್ರಗ್ಸ್‌ ಪ್ರಕರಣ- ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಬಂಧನ!

- Advertisement -
- Advertisement -

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಪರ್ವೇಜ್‌ ಖಾನ್‌ ಅಲಿಯಾಸ್‌ ಚಿಂಕು ಪಠಾಣ್‌ ಎಂಬಾತನನ್ನು ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಮುಂಬೈನಲ್ಲಿ ಬುಧವಾರ ಬಂಧಿಸಿದ್ದಾರೆ.

‘ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮುಂಬೈನ ಪ್ರದೇಶವೊಂದರಲ್ಲಿ ಅವಿತಿದ್ದ ಪರ್ವೇಜ್‌ ಖಾನ್‌ನನ್ನು ಬಂಧಿಸಿತು. ಈ ವೇಳೆ ಕೆಲವು ಡ್ರಗ್ಸ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಫೆಡ್ರೋನ್‌ (ಎಂಡಿ) ಎಂಬ ಮಾದಕವಸ್ತುವಿನ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆಲವು ಪೆಡ್ಲರ್‌ಗಳೊಂದಿಗೂ ಪರ್ವೇಜ್‌ ಸಂಪರ್ಕ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!