- Advertisement -
- Advertisement -
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿನ ಮನೆಯ ಮುಂದಿನ ರಸ್ತೆ ಬದಿಯಲ್ಲಿ ಆಡುತ್ತಿದ್ದ ಬಾಲಕ ಅನುಭವ್‌ನನ್ನು ಇಂಡಿಕಾ ಕಾರಿನಲ್ಲಿ ಮನೆಯವರು ನೋಡನೋಡುತ್ತಿದ್ದಂತೆಯೇ ಅಪಹರಣ ನಡೆಸಿದ್ದರು.

ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ 17 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಮೊತ್ತವನ್ನು ಬಿಟ್ ಕಾಯಿನ್ ಮೂಲಕ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂರು ದಿನಗಳ ಒಳಗೆ ಬಾಲಕನನ್ನು ಪತ್ತೆ ಹಚ್ಚಿ , 6 ಮಂದಿ ಅಪಹರಣಕಾರರನ್ನು ಬಂಧಿಸಿದ್ದರು. ಬಾಲಕ ಕೋಲಾರದಲ್ಲಿ ಸುರಕ್ಷಿತವಾಗಿ ಪೊಲೀಸರ ಕೈ ಸೇರಿದ್ದ.

ಇದೀಗ, ನ್ಯಾಯಾಲಯವು ಆರೋಪಿಗಳಾದ ಮಾಲೂರಿನ ಹೊಸಳ್ಳಿಯ ಮಂಜುನಾಥ್ ಮತ್ತು ಮಹೇಶ್ ಗೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.


- Advertisement -








