Wednesday, May 1, 2024
spot_imgspot_img
spot_imgspot_img

ಡ್ರಗ್ಸ್‌ ದಂಧೆ ಕೇಸ್‌ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ- ಇಂದ್ರಜಿತ್‌ ಲಂಕೇಶ್

- Advertisement -G L Acharya panikkar
- Advertisement -

ಬೆಂಗಳೂರು: ಡ್ರಗ್ಸ್‌ ದಂಧೆ ಕೇಸ್‌ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇದ್ದಾರೆ ಎಂದು ನಟ ನಿರ್ದೇಶನ ಇಂದ್ರಜಿತ್‌ ಲಂಕೇಶ್‌ ಹೇಳಿದ್ದಾರೆ.


ಸ್ಯಾಂಡಲ್‌ವುಡ್‌ ಡ್ರಗ್ಸ್‌ ಸಂಬಂಧ ಇಂದ್ರಜಿತ್‌ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಅವರು ಗುರುವಾರ ಪೊಲೀಸ್‌ ಆಯುಕ್ತರ ಕಚೇರಿಗೆ ಆಗಮಿಸಿದ್ದರು. ಆದರೆ, ತನಿಖಾಧಿಕಾರಿಗಳು ಬಂದೋಬಸ್ತ್ ಡ್ನೂಟಿಯಲ್ಲಿದ್ದ ಕಾರಣ ಅವರ ವಿಚಾರಣೆಯನ್ನು ನಡೆಸಲಿಲ್ಲ.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಇಂದ್ರಜಿತ್‌, ಡ್ರಗ್ಸ್‌ ಕೇಸ್‌ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ. ಆದರೆ, ಇದರಲ್ಲಿ ದೊಡ್ಡ ತಿಮಿಂಗಲಗಳು, ದೊಡ್ಡ ವ್ಯಕ್ತಿಗಳು ಇದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.

ಬೆಂಗಳೂರು ಡ್ರಗ್ಸ್‌ ರಾಜಧಾನಿಯಾಗಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ವಿರೋಧಪಕ್ಷಗಳು ದನಿಯೆತ್ತಿ ಪ್ರಕರಣವನ್ನು ಮತ್ತಷ್ಟು ಚುರುಕುಗೊಳಿಸುವಂತೆ ಹೇಳಬೇಕು ಎಂದರು.

- Advertisement -

Related news

error: Content is protected !!