Thursday, July 30, 2026
spot_imgspot_img
spot_imgspot_img

“ನಿಮ್ಮವರ ರಕ್ಷಣೆ ನಮ್ಮ ಹೊಣೆ “- ಇಸ್ರೇಲ್​​ಗೆ ಭಾರತ ಭರವಸೆ

- Advertisement -
- Advertisement -

ನವದೆಹಲಿ: ಇಸ್ರೇಲ್​ ರಾಯಭಾರಿ ಕಚೇರಿಯ ಬಳಿ ಸಂಭವಿಸಿರುವ ಸ್ಫೋಟದ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ತಿಳಿಸಿದ್ದಾರೆ.

ಸ್ಫೋಟ ಸಂಬಂಧ ಟ್ವೀಟ್ ಮಾಡಿರುವ ಸಚಿವರು, ಘಟನೆ ಸಂಬಂಧ ಇಸ್ರೇಲ್​ ವಿದೇಶಾಂಗ ಸಚಿವ ಗಬಿ ಅಶ್ಕೆನಜಿ ಜೊತೆ ಮಾತನಾಡಿದ್ದೇನೆ, ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ.

ರಾಯಭಾರ ಕಚೇರಿ ಮತ್ತು ಇಸ್ರೇಲ್ ರಾಜ ತಾಂತ್ರಿಕರಿಗೆ ರಕ್ಷಣೆ ನೀಡುವ ಭರವಸೆಯನ್ನ ನೀಡಿದ್ದೇನೆ. ಈಗಾಗಲೇ ಅಧಿಕಾರಿಗಳು ತನಿಖೆಯನ್ನ ಆರಂಭಿಸಿದ್ದಾರೆ, ಅಪರಾಧಿಗಳನ್ನ ಶೀಘ್ರದಲ್ಲೇ ಪತ್ತೆ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರರಾಜಧಾನಿ ದೆಹಲಿಯ ಇಸ್ರೇಲ್​ ರಾಯಭಾರಿ ಕಚೇರಿಯ ಬಳಿ ಸ್ಫೋಟ ಸಂಭವಿಸಿದ ಬೆನಲ್ಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಿದೆ.

- Advertisement -

Related news

error: Content is protected !!