Tuesday, April 30, 2024
spot_imgspot_img
spot_imgspot_img

ಮಂಗಳೂರು: ರೆಸ್ಟೋರೆಂಟ್ ನಲ್ಲಿ ಗೆಳೆಯರ ಜೊತೆ ಕುಳಿತಿದ್ದ ಯುವತಿಗೆ ಹಳೆ ಗೆಳೆಯನ ತಂಡದಿಂದ ದಾಳಿ!

- Advertisement -G L Acharya panikkar
- Advertisement -

ಮಂಗಳೂರು: ಸ್ನೇಹಿತರೊಂದಿಗೆ ಯುವತಿ ರೆಸ್ಟೋರೆಂಟ್‌ವೊಂದರಲ್ಲಿ ಕುಳಿತಿದ್ದಾಗ ಆಕೆಯ ಹಳೆ ಸ್ನೇಹಿತ ಮತ್ತು ಆತನ ಗೆಳೆಯರು ಏಕಾಏಕಿ ದಾಳಿ ನಡೆಸಿದ ಘಟನೆ ಮಂಗಳೂರು ನಗರದ ಕದ್ರಿಯಲ್ಲಿ ನಡೆದಿದೆ.

ಕದ್ರಿಯ ಬಾರ್ & ರೆಸ್ಟೋರೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ಸಿಸಿಟಿವಿ ವಿಡಿಯೋ ತುಣುಕು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿಯು ತನ್ನ ಮೂವರು ಗೆಳೆಯರೊಂದಿಗೆ ರೆಸ್ಟೋರೆಂಟ್ ನಲ್ಲಿ ಕುಳಿತಿದ್ದಾಗ ಏಕಾಏಕಿ ನುಗ್ಗಿದ ನಾಲ್ವರು ಯುವಕರ ತಂಡ ದಾಳಿ ನಡೆಸಿದೆ. ಹೋಟೆಲ್‌ನಲ್ಲಿ ಸಿಕ್ಕ ವಸ್ತುಗಳಿಂದ ಹೊಡೆದಾಟ ನಡೆಸಿದ್ದು, ಈ ವೇಳೆ ಓರ್ವ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ. ಯುವತಿಯೊಂದಿಗೆ ಇದ್ದ ಯುವಕ ಚೂರಿ ಇರಿತದಿಂದ ಗಾಯಗೊಂಡಿದ್ದಾನೆ. ಘಟನೆ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!