Saturday, April 27, 2024
spot_imgspot_img
spot_imgspot_img

ವಾಕಿಂಗ್‌ನಿಂದ ಸಿಗುವ ಪ್ರಯೋಜನ

- Advertisement -G L Acharya panikkar
- Advertisement -

ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು, ತೂಕ ನಷ್ಟಕ್ಕೆ , ಮಧುಮೇಹ ತಡೆಗೆ ತಜ್ಞರು ವಾಕಿಂಗ್ ಮಾಡಿ ಅಂತಾ ಹೇಳ್ತಾರೆ. ಇಡೀ ದೇಹವನ್ನು ಆರೋಗ್ಯವಾಗಿಡೋಕೆ ವಾಕಿಂಗ್ ತುಂಬಾ ಮುಖ್ಯ. ಇದು ತೂಕ ಇಳಿಕೆಗೆ ಮತ್ತು ನಿಯಂತ್ರಣದಲ್ಲಿಡೋಕೆ ಸಹಾಯ ಮಾಡುತ್ತದೆ. ವಾಕಿಂಗ್ ಮಾಡಿದ್ರೆ ಒಂದಲ್ಲ ಸಾಕಷ್ಟು ಆರೋಗ್ಯ ಪ್ರಯೋಜನ ಸಿಗುತ್ತೆ. ಹೃದಯದ ಆರೋಗ್ಯ ಕಾಪಾಡಬಹುದು. ವಾಕಿಂಗ್ ದೈಹಿಕ ಚಟುವಟಿಕೆ ಇಡೀ ದೇಹ ಮತ್ತು ಮನಸ್ಸನ್ನು ತಾಜಾ ಆಗಿರಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬೇಗ ಬರ್ನ್ ಮಾಡೋಕೆ ಇದು ಸಹಾಯ ಮಾಡುತ್ತೆ ಅಂತಾ ಹೇಳಿದೆ.

ಜಿ ಎ ವಾಲಿಸ್ ಮತ್ತು ಜೇವಿಯರ್ ಟಿ ಗೊನ್ಜಾಲೆಜ್ ಅವರ ಸಂಶೋಧನಾ ವರದಿಯು 2018 ರಲ್ಲಿ ಪಬ್‌ಮೆಡ್ ಸೆಂಟ್ರಲ್‌ ನಲ್ಲಿ ಪ್ರಕಟವಾಗಿದೆ. ಅದರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದ್ರೆ ಕಾರ್ಬೋಹೈಡ್ರೇಟ್‌ ಗಳು ತಕ್ಷಣವೇ ಗ್ಲೂಕೋಸ್‌ ಆಗಿ ವಿಭಜನೆ ಆಗುತ್ತವೆ.

ಫಿಟ್ನೆಸ್ ವಿಷಯಕ್ಕೆ ಬಂದರೆ ಅಥವಾ ಆರೋಗ್ಯದ ವಿಷಯಕ್ಕೆ ಬಂದರೆ ವಾಕಿಂಗ್ ಅತಿಮುಖ್ಯವಾದುದು. ಪ್ರತಿನಿತ್ಯ ನಾವು ಮಾಡುವ ೩೦ ನಿಮಿಷಗಳ ವಾಕಿಂಗ್ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವುದಲ್ಲದೇ, ಆರೊಗ್ಯಕರವಾದ ಜೀವನ ಸಾಗಿಸಲು ಅನುವು ಮಾಡಿಕೊಡುತ್ತದೆ.

ಊಟ ಮಾಡಿದ ತಕ್ಷಣ ಮಲಗುವುದು, ಬೆಳಗ್ಗೆ ೮ ಗಂಟೆಯವರೆಗೆ ಮಲಗುವುದು, ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಇವೆಲ್ಲಾ ಸೋಮಾರಿತನದ ಸಂಕೇತ. ಒತ್ತಡದ ಜೀವನ ನಮ್ಮ ಮೇಲೆ ಇರುವುದರಿಂದ ಸಮಯ ಇಲ್ಲದೇ ಇರಬಹುದು. ಆದರೆ ಮೊಬೈಲ್ ಅಥವಾ ಟಿವಿಗೆ ನೀಡುವ ಸಮಯದಲ್ಲಿ ೩೦ ನಿಮಿಷ ನಿಮ್ಮ ಆರೋಗ್ಯಕ್ಕೂ ನೀಡಿ.

- Advertisement -

Related news

error: Content is protected !!