Saturday, June 28, 2025
spot_imgspot_img
spot_imgspot_img

ಸಾಕಷ್ಟು ರಾಜಕೀಯ ಹೈಡ್ರಾಮ ನಡೆದ ವೀರಕಂಭ ಗ್ರಾಮಪಂಚಾಯತ್ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ- ಉಪಾಧ್ಯಕ್ಷೆ ಯಾಗಿ ಕಾಂಗ್ರೆಸ್ ನ ಶೀಲಾ ವೇಗಸ್

- Advertisement -
- Advertisement -

ವಿಟ್ಲ: ವೀರಕಂಭ ಗ್ರಾಮಪಂಚಾಯತ್ ನಲ್ಲಿ 7 ಕಾಂಗ್ರೆಸ್ ಬೆಂಬಲಿತ ಮತ್ತು 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿದ್ದರು ಈ ಪರಿಸ್ಥಿತಿಯಲ್ಲಿ ವೀರಕಂಬ ಗ್ರಾಮಪಂಚಾಯತ್ ಅತಂತ್ರ ಪರಿಸ್ಥಿತಿಯಲ್ಲಿತ್ತು. ಚುನಾವಣಾ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದ್ದು ,ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಿನೇಶ್ ಇವರಿಗೆ 8 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಕಾಂಗ್ರೆಸ್ ಬೆಂಬಲಿತ ರಘು ಪೂಜಾರಿಯವರು 6 ಮತ ಪಡೆದು ಸೋಲು ಕಂಡಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಮಬಲ ಬಂದಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಟೋಸ್ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ವೇಗಸ್ ಆಯ್ಕೆಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೊಬ್ಬರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಇವರ ಸಮ್ಮುಖದಲ್ಲಿ ಬಿಜೆಪಿಗೆ ಬಂದಿದ್ದು,ಅದೇ ದಿನ ಸಂಜೆ ಅದೇ ಅಭ್ಯರ್ಥಿಯು ಮಾಜಿ ಸಚಿವ ರಮನಾಥ್ ರೈ ಯವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.ಇದೀಗ ಬಾರಿ ಕುತೂಹಲ ಕೆರಳಿಸಿದ ವೀರಕಂಭ ಗ್ರಾಮ ಪಂಚಾಯತ್ ಚುನಾವಣೆ ಕೊನೆಗೂ ಬಿಜೆಪಿ ತೆಕ್ಕೆಗೆ ಬಂದಿದೆ.

- Advertisement -

Related news

error: Content is protected !!