Sunday, August 2, 2026
spot_imgspot_img
spot_imgspot_img

ಶಿವಮೊಗ್ಗ: ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

- Advertisement -
- Advertisement -

ಶಿವಮೊಗ್ಗ: ರೌಡಿಶೀಟರ್’ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್’ನ ಮೇಲೆ ತುಂಗಾ ನಗರ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.

ಬಚ್ಚನ್ ಗ್ಯಾಂಗ್ನ ಸಹಚರ ದೀಪು ಅಲಿಯಾಸ್ ಡಿಂಗಾ ಪೊಲೀಸರ ಫೈರಿಂಗ್ ಗೆ ಒಳಗಾದ ರೌಡಿಶೀಟರ್. ಈತ ಮಾರ್ಕೆಟ್ ಲೋಕಿ ಹಾಗೂ ಕುಖ್ಯಾತ ರೌಡಿ ಬಚ್ಚನ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದು, ಬಚ್ಚನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ತನ್ನ ಸಹಚರ ದೀಪು ಮೂಲಕ ಇಮ್ರಾನ್ ಎಂಬ ವ್ಯಾಪಾರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ.

ಹಣ ನೀಡದ ವ್ಯಾಪಾರಿ ಮೇಲೆ ಸಿಟ್ಟಿಗೆದ್ದ ಬಚ್ಚನ್ ಗ್ಯಾಂಗ್, ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.
ಈ ಹಲ್ಲೆಯ ಪ್ರಮುಖ ರೂವಾರಿ ದೀಪು ಅಲಿಯಾಸ್ ಡಿಂಗಾನ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು.

- Advertisement -

Related news

error: Content is protected !!