Tuesday, April 30, 2024
spot_imgspot_img
spot_imgspot_img

ಮತ್ತೊಂದು ಮಗುವಿನ ಜೀವಕ್ಕೆ ಆಸರೆಯಾಗಲು, ಹೊಸವೇಷದಲ್ಲಿ “ವಿಕ್ಕಿ ಶೆಟ್ಟಿ ಬೆದ್ರ”

- Advertisement -G L Acharya panikkar
- Advertisement -

ಮಂಗಳೂರು: ಫೆ. 19 ಶುಕ್ರವಾರ ಸಂಜೆಯಿಂದ 22 ಆದಿತ್ಯವಾರ‌ದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿನ ಚಿಕಿತ್ಸೆಗಾಗಿ ಹೊಸವೇಷದಲ್ಲಿ ಬರಲಿದ್ದಾರೆ “ವಿಕ್ಕಿ ಶೆಟ್ಟಿ ಬೆದ್ರ”.

ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಗೃಹಿಣಿ ತಾಯಿ. ಚಿಕ್ಕದಾದ ಸಂತೋಷದ ಚಿಲುಮೆ ಆಗಿದ್ದ ಈ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ತಮ್ಮ 7 ವರ್ಷದ ಮಗುವಿಗೆ ಕಾಡುವ ವಿಪರೀತ ಜ್ವರ ಬರಸಿಡಿಲಿನಂತೆ ಎಗರಿದೆ. ಎಲ್ಲರ ಕಣ್ಮಣಿಯಾಗಿದ್ದ ಈ ಕಂದಮ್ಮ ಬಿಡದೆ ಕಾಡುವ ಅನಾರೋಗ್ಯದಿಂದ ಕಂಗಾಲಾಗಿದ್ದಾರೆ.

ಮಗುವನ್ನು ದೇರಳಕಟ್ಟೆ , ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಸ್ತುತ ಅತ್ತಾವರದ ಕೆ ಎಮ್ ಸಿ ಆಸ್ಪತ್ರೆಯಲ್ಲಿರುವ ಈ ಮಗು H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.

ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ ಕೆ ಎಮ್ ಸಿ ವೈದ್ಯರ ನಿದರ್ಶನದಂತೆ ಮಗುವನ್ನು “ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ” ಕರೆದುಕೊಂಡು ಹೋಗಿದ್ದು ಅಲ್ಲಿ ನ ಉನ್ನತ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸುತ್ತಾರೆ.

ಈ ಚಿಕಿತ್ಸೆಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದ್ದು ಈ ಮೊತ್ತವನ್ನು ಭರಿಸಲು ಕುಟುಂಬವು ಆಶಕ್ತವಾಗಿರುವುದರಿಂದ , ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆ ಮತ್ತು ಆತ್ಮೀಯರ ಸಹಕಾರದೊಂದಿಗೆ ದಿನಾಂಕ 19/02/2021 ಶುಕ್ರವಾರ ಸಂಜೆಯಿಂದ 22/02/2021 ಆದಿತ್ಯವಾರ‌ದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರದಲ್ಲಿ ವಿಕ್ಕಿ ಶೆಟ್ಟಿ ಬೆದ್ರ ಬರಲಿದ್ದಾರೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿಸಿದ್ದಾರೆ.

- Advertisement -

Related news

error: Content is protected !!