Sunday, November 8, 2026
spot_imgspot_img
spot_imgspot_img

ಆನೆಯ ಮೇಲೆ ನಗ್ನವಾಗಿ ಮಲಗಿದ ಅಲೆಸ್ಯ : ಮಾಡೆಲ್ ಹುಚ್ಚಾಟಕ್ಕೆ ಕೆಂಡಾಮಂಡಲವಾದ ಪ್ರಾಣಿದಯಾ ಸಂಘ

- Advertisement -
- Advertisement -

ಬಾಲಿ : ರಷ್ಯಾ ಮೂಲದ ಮಾಡೆಲ್ ಅಲೆಸ್ಯ ಕಾಫೆಲ್ನಿಕೋವಾ ಅಳಿವಿನಂಚಿನಲ್ಲಿರುವ ಸುಮಾತ್ರನ್ ಆನೆ ಮೇಲೆ ಬೆತ್ತಲೆ ಮಲಗಿ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚಿಗೆ ಇಂಡೋನೇಷಿಯಾದ ಬಾಲಿಗೆ ಹಾರಿದ್ದ ಅಲೆಸ್ಯ, ಅಲ್ಲಿ ಹೊಸ ಫೋಟೊ ಶೂಟ್ ನಡೆಸಿದ್ದರು. 2012 ರಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿದ ಸುಮಾತ್ರನ್ ಆನೆ ಮೇಲೆ ವಿವಸ್ತ್ರಳಾಗಿ ಮಲಗಿ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು. ಈ ಶೂಟ್ ನ ವಿಡಿಯೋ ತುಣುಕೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಅಲೆಸ್ಯ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ವಿರೋಧ ಪಡೆದುಕೊಂಡಿತು. ಆಕೆಯ ಹುಚ್ಚಾಟಕ್ಕೆ ಕೆಂಡಾಮಂಡಲಗೊಂಡ ಪ್ರಾಣಿದಯಾ ಸಂಘದವರು, ಪರಿಸರ ಪ್ರೇಮಿಗಳು ಇದೊಂದು ಅತಿರೇಕದ ವರ್ತನೆ ಎಂದು ಖಂಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಲೆಸ್ಯಾ ತಮ್ಮ ಇನ್ಸ್ಟಾ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ.

- Advertisement -

Related news

error: Content is protected !!