- Advertisement -
- Advertisement -
ಮುಂಬೈ: ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದ್ದರೂ ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಸಿನೆಮಾ ತಾರೆಯರು ತುಟಿ ಬಿಚ್ಚುತ್ತಿಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಧೋರಣೆ ಖಂಡಿಸಿ ಅವರ ಚಿತ್ರೀಕರಣಕ್ಕೆ ಕೂಡ ಅಡ್ಡಿಪಡಿಸಲಾಗುವುದು ಎಂದು ಪಟೋಲೆ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಅಮಿತಾಭ್ ಬಚ್ಚನ್ ನಿವಾಸದ ಮುಂದೆ ಭದ್ರತೆ ಹೆಚ್ಚಿಸಲಾಗಿದೆ.

ಅಕ್ಷಯ್ ಕುಮಾರ್ ವಿರುದ್ದ ಕೂಡ ನಾನಾ ಪಟೋಲೆ ಕಿಡಿ ಕಾರಿದ್ದಾರೆ. ಎಲ್ಲ ನಟರೂ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.


- Advertisement -








