Sunday, June 29, 2025
spot_imgspot_img
spot_imgspot_img

ವಿಟ್ಲ: ಲಕ್ಷ ಮೌಲ್ಯದ ಅಡಿಕೆ ಕಳವು- ಕೋಣೆಯ ಬೀಗ ಮುರಿದು 300 ಕೆಜಿ ಅಡಿಕೆ ದೋಚಿದ ಖದೀಮರು!

- Advertisement -
- Advertisement -

ವಿಟ್ಲ: ಮನೆಯ ಎದುರು ಅಡಿಕೆ ಹಾಗೂ ತೆಂಗಿನಕಾಯಿ ಶೇಖರಣೆ ಮಾಡುವ ಕೊಣೆಯಲ್ಲಿದ್ದ ಸುಮಾರು 1 ಲಕ್ಷ ಮೌಲ್ಯದ ಇಡಿ ಅಡಿಕೆಯನ್ನು ಕಳ್ಳರು ದೋಚಿರುವ ಘಟನೆ ಬಂಟ್ವಾಳ ತಾಲೂಕಿನ ಕರೋಪ್ಪಾಡಿ ಗ್ರಾಮದ ಪೆರ್ನೆಮುಗೇರು ಎಂಬಲ್ಲಿ ನಡೆದಿದೆ.

ಕರೋಪ್ಪಾಡಿ ಗ್ರಾಮದ ಪೆರ್ನೆಮುಗೇರುವಿನಲ್ಲಿ ವಾಸ್ತವ್ಯವಿರುವ ಅಬ್ದುಲ್‌ ರಝಾಕ್‌ ಎಂಬವರ ಮನೆಯ ಎದುರು ಅಡಿಕೆ ಹಾಗೂ ತೆಂಗಿನಕಾಯಿ ಶೇಖರಣೆ ಮಾಡುವ ಕೊಣೆಯಲ್ಲಿ, 15 ಗೋಣಿ ಚೀಲದಲ್ಲಿದ್ದ ಸುಮಾರು 1 ಲಕ್ಷ ಮೌಲ್ಯದ, 300 ಕೆಜಿ ಇಡಿ ಅಡಿಕೆಯನ್ನು ಕೋಣೆಯ ಬೀಗವನ್ನು ಮುರಿದು ಒಳಗಡೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!