Sunday, June 29, 2025
spot_imgspot_img
spot_imgspot_img

ಮಂಗಳೂರು: ಕಾರು ಮಾರಾಟ ಪ್ರಕರಣ- ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಸ್ಪೆಂಡ್

- Advertisement -
- Advertisement -

ಮಂಗಳೂರು: ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ಇಬ್ಬರನ್ನು ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ. ಸಿಸಿಬಿಯಲ್ಲಿದ್ದ ರಾಜ ಮತ್ತು ಆಶಿತ್ ಡಿಸೋಜ ಎಂಬ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ದಿನಗಳ ಹಿಂದಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ನಡುವೆ ಕಾರು ಮಾರಾಟ ಮತ್ತು ಅದಕ್ಕೆ ಕಾರಣವಾದ ಮನಿ ಡಬ್ಲಿಂಗ್ ಪ್ರಕರಣವನ್ನು ಡಿಜಿಪಿಯವರು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ನೀಡಿದ ವರದಿಯಂತೆ ಡಿಜಿಪಿ ಕ್ರಮ ಜರುಗಿಸಿದ್ದರು.

- Advertisement -

Related news

error: Content is protected !!