Friday, June 26, 2026
spot_imgspot_img
spot_imgspot_img

ಯುವತಿಯರನ್ನು ನಗ್ನವಾಗಿ ನೃತ್ಯ ಮಾಡಿಸಿದ ಪೊಲೀಸರು: ಉನ್ನತ ಮಟ್ಟದ ತನಿಖೆಗೆ ಆದೇಶ

- Advertisement -
- Advertisement -

ಮಹಾರಾಷ್ಟ್ರ: ಮಹಾರಾಷ್ಟ್ರದ ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರನ್ನು ಬೆತ್ತಲಾಗಿ ನೃತ್ಯ ಮಾಡುವಂತೆ ಪೊಲೀಸರು ಒತ್ತಾಯಿಸಿರುವ ಘಟನೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ. ಇದರ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯವನ್ನು ವಿರೋಧ ಪಕ್ಷದ ಸದಸ್ಯರು ಕೈಗೆತ್ತಿಕೊಂಡ ನಂತರ ಸಚಿವರು ರಾಜ್ಯ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರ ದೂರಿದಂತೆ, “ಕೆಲವು ಪೊಲೀಸರು ಮತ್ತು ಹೊರಗಿನವರು ತನಿಖೆಯ ನೆಪದಲ್ಲಿ ಹಾಸ್ಟೆಲ್‌ ಒಳಗೆ ಬಂದು ಬೆತ್ತಲಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ” ಎಂದು ವರದಿಯಾಗಿದೆ.

- Advertisement -

Related news

error: Content is protected !!