- Advertisement -
- Advertisement -
ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಿತು.

ಸಂಜೆ 6 ಗಂಟೆಗೆ ದೀಪಾರಾಧನೆ, ರಾತ್ರಿ 8 ಗಂಟೆಗೆ ಲಕ್ಷಬಿಲ್ವಾರ್ಚನೆ, 9 ಗಂಟೆಗೆ ಏಕಾದಶಿ ರುದ್ರಾಭಿಷೇಕ ನಂತರ ರಂಗಪೂಜೆ ನಡೆಯಲಿದೆ.

ನಾಳೆ 12-03-2021 ರಂದು ಪ್ರಾತಃಕಾಲ ಗಂಟೆ 5:30 ಕ್ಕೆ ಸಣ್ಣ ರಥೋತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಲಿದೆ.

ಇಂದು (11-03-2021) ರಾತ್ರಿ 8 ರಿಂದ ದೇವಾಲಯದ ರಥಗದ್ದೆಯಲ್ಲಿ ಹಿಂದೂ ಯುವ ಸೇನೆ ವಿಟ್ಲ ಅರ್ಪಿಸುವ ರಾಗ್‍ರಂಗ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ನೇರವೀಕ್ಷಣೆ ನಿಮ್ಮ ನೆಚ್ಚಿನ ವಿ.ಟಿವಿಯಲ್ಲಿ ವೀಕ್ಷಿಸಬಹುದು.

- Advertisement -








