- Advertisement -
- Advertisement -
ಕಾಪು: ನದಿಯಲ್ಲಿ ಕೊಯ್ಯೊಲ್ ಹೆಕ್ಕಲು ಹೋದ ಯುವಕನೋರ್ವ ಕಣ್ಮರೆಯಾದ ಘಟನೆ ಕಾಪು ಉದ್ಯಾವರ ಸಮೀಪದ ಪಿತ್ರೋಡಿ ಕಡವಿನ ಬಾಗಿಲು ಬಳಿಯಲ್ಲಿ ಸಂಭವಿಸಿದೆ.

ಶಿರ್ವ ಪಂಜಿಮಾರು ನಿವಾಸಿ ಸುಮಂತ್ (22) ಎಂಬ ಯುವಕ ಇಬ್ಬರು ಸ್ನೇಹಿತರೊಂದಿಗೆ ಉದ್ಯಾವರ ಪಿತ್ರೋಡಿಯ ನದಿಯಲ್ಲಿ ಮರುವಾಯಿ ಹೆಕ್ಕಲು ನೀರಿಗಿಳಿದಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆಂದು ತಿಳಿದು ಬಂದಿದೆ.

ಸ್ಥಳೀಯರಿಂದ ಹುಡುಕಾಟ ನಡೆಯುತ್ತಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.


- Advertisement -








