Monday, October 19, 2026
spot_imgspot_img
spot_imgspot_img

ಬೆಳ್ತಂಗಡಿ: ಸ್ನಾನ ಗೃಹದಲ್ಲಿ ಕಾಳಿಂಗ ಸರ್ಪ ಪತ್ತೆ

- Advertisement -
- Advertisement -

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಮುಂಡಾಜೆ ಕಾಪು ರಕ್ಷಿತಾರಣ್ಯದ ಬದಿಯಲ್ಲಿರುವ ಮನೆಯ ಸ್ನಾನ ಗೃಹದಲ್ಲಿ ಸೋಮವಾರ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ.

ಚಾರ್ಮಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ದೇವಕಿ ಅವರ ಮನೆಯಲ್ಲಿ ಕಾಳಿಂಗಸರ್ಪ ಕಂಡುಬಂದಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ ನೇತೃತ್ವದಲ್ಲಿ ಸ್ನೇಕ್ ಅನಿಲ್ ಅವರು ಹತ್ತು ಅಡಿಗಿಂತಲೂ ಉದ್ದವಾದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು, ರಕ್ಷಿತಾರಣ್ಯಕ್ಕೆ ಬಿಟ್ಟರು.

- Advertisement -

Related news

error: Content is protected !!