Tuesday, July 1, 2025
spot_imgspot_img
spot_imgspot_img

ಬೆಳ್ತಂಗಡಿ: ಆಕಸ್ಮಿಕ ಬೆಂಕಿ ಅವಘಡ; ಕೊಟ್ಟಿಗೆಯಲ್ಲಿದ್ದ ಅಪಾರ ಪ್ರಮಾಣದ ಸೊತ್ತು ನಷ್ಟ!

- Advertisement -
- Advertisement -

ತೋಟತ್ತಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರಿ ಸಂಜೀವ ಯಾನೆ ವೆಂಕಪ್ಪ ಗೌಡರವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ತೆಂಗಿನ ಕಾಯಿ, ಬೈಹುಲ್ಲು, ರಬ್ಬರ್ ಶೀಟ್ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಮಾ.23 ರಂದು ರಾತ್ರಿ ನಡೆದಿದೆ.

ಅಂದು ರಾತ್ರಿ ಮನೆಯವರು ಎಂದಿನಂತೆ ಊಟ ಮುಗಿಸಿ ಮಲಗಿದ್ದು, ಬೆಂಕಿ ಉರಿಯುವ ಸದ್ದು ಕೇಳಿ ಹೊರಗೆ ಓಡಿಬಂದು ನೋಡಿದಾಗ ಕೊಟ್ಟ್ಟಿಗೆಯಲ್ಲಿ ದಾಸ್ತಾನೀಕರಿಸಿದ 3 ಸಾವಿರ ಒಣ ತೆಂಗಿನಕಾಯಿಗಳು, ಮಾರಾಟಕ್ಕೆಂದು ಸಿದ್ಧಪಡಿಸಿದ ರಬ್ಬರ್ ಶೀಟ್, ಜಾನುವಾರುಗಳಿಗಾಗಿ ಬೈಹುಲ್ಲಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದ್ದು, ಅಂದಾಜು ಸುಮಾರು 5 .ಲಕ್ಷ ರೂ ನಷ್ಟವುಂಟಾಗಿದೆ.


ಬೆಳ್ತಂಗಡಿ ಅಗ್ನಿಶಾಮಕ ದಳದವರ ಹಾಗೂ ಸ್ಥಳೀಯರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಮನೆಗೆ ಬೆಂಕಿ ತಗುಲಿ ಸಂಭವಿಸಬಹುದಾದಂತಹ ಹೆಚ್ಚಿನ ಅನಾಹುತ ತಪ್ಪಿದೆ.

- Advertisement -

Related news

error: Content is protected !!