Tuesday, April 30, 2024
spot_imgspot_img
spot_imgspot_img

ಕೊಡಿಪಾಡಿ ಶ್ರೀ ಜನಾರ್ದನ ದೇವರ ವರ್ಷಾವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ಕೊಡಿಪಾಡಿ: ಶ್ರೀ ಜನಾರ್ದನ ದೇವರ ವರ್ಷಾವಧಿ ಉತ್ಸವಗಳು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಗಳ ನೇತೃತ್ವದಲ್ಲಿ ಮಾ.26ರಿಂದ ಮಾ.29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾ.26ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಸಾಯಂಕಾಲ ಹಸಿರು ಹೊರೆಕಾಣಿಕೆ ಮೆರವಣಿಗೆ, ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಹಾಗೂ ಶ್ರೀ ಜನಾರ್ದನ‌ ದೇವರಿಗೆ ರಂಗಪೂಜೆ ನಡೆದು, ಬಳಿಕ ಪ್ರಸಾದ ವಿತರಣೆ ನಡೆಯಿತು.

ಮಾ.27ರಂದು ಬೆಳಗ್ಗೆ ಗಣಪತಿ ಹೋಮ, ಸೀಯಾಳಾಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಾಯಂಕಾಲ ರಂಗಫೂಜೆ ಬಳಿಕ ಬಲಿ ಹೊರಟು, ಶ್ರೀ ದೇವರ ಭೂತ ಬಲಿ ಉತ್ಸವ, ಶ್ರೀ ದೇವರ ಉತ್ಸವ, ಪಲ್ಲಕಿ ಉತ್ಸವ, ನೃತ್ಯಬಲಿ, ಕಟ್ಟೆಪೂಜೆ ನಡೆಯಲಿದೆ.

ಮಾ.28ರಂದು ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲುಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ, ಸಾಯಂಕಾಲ ಭಜನಾ ಕಾರ್ಯಕ್ರಮ, ರಾತ್ರಿ ಕಾರ್ತಿಕ ಪೂಜೆ, ದೈವದ ಭಂಡಾರ ತೆಗೆದು ಪ್ರಸಾದ ವಿತರಣೆ ನಡೆಯಲಿದೆ.

ಮಾ.29ರಂದು ಹುಲಿಭೂತ ದೈವದ ವರ್ಷಾವಧಿ ನೇಮ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೈವಗಳ ತಂಬಿಲ, ರಾತ್ರಿ ಶ್ರೀ ದೇವರಿಗೆ ಕಾರ್ತಿಕ ಪೂಜೆ ಜರಗಲಿರುವುದು.

- Advertisement -

Related news

error: Content is protected !!