Tuesday, June 23, 2026
spot_imgspot_img
spot_imgspot_img

ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರ ಮೇಲೆ ಮುಸ್ಲಿಂ ಲೀಗ್ ನಿಂದ ಹಲ್ಲೆ!

- Advertisement -
- Advertisement -

ಮಂಜೇಶ್ವರ: ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರ ಮೇಲೆ ಮುಸ್ಲಿಂ ಲೀಗ್ ನವರು ಹಲ್ಲೆ ಮಾಡಿದ್ದಾರೆ.

ಗಂಭೀರ ಗಾಯಗೊಂಡ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸ್ಲಿಂ ಲೀಗಿನ ಪೈವಳಿಕೆ ಪಂಚಾಯತ್ ಸದಸ್ಯ ಹಾಗೂ ಪೈವಳಿಕೆ ಮುಸ್ಲಿಮ್ ಲೀಗಿನ ನೇತಾರ ಇಬ್ಬರು ಸೇರಿ ಪೈವಳಿಕೆ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಇವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆಂದು ಮಂಜುನಾಥ ಶೆಟ್ಟಿ ಅವರು ದೂರಿದ್ದಾರೆ.

driving

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ನೇತಾರ ಮೇಲೆ ಮುಸ್ಲಿಂ ಲೀಗ್ ಹಲ್ಲೆಗೆ ಇಳಿದಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಕಾಮ್ರೇಡ್ ವಿ ವಿ ರಮೇಶನ್ ಗಾಯಾಳುವನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ.

- Advertisement -

Related news

error: Content is protected !!