Tuesday, June 23, 2026
spot_imgspot_img
spot_imgspot_img

ಅಣ್ಣಾಮಲೈರವರಿಗೆ ಕೊರೊನಾ ಪಾಸಿಟಿವ್!

- Advertisement -
- Advertisement -

ಚೆನ್ನೈ: ಮಾಜಿ ಐಪಿಎಸ್​ ಅಧಿಕಾರಿ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ನನಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಕೊರೊನಾ ಲಕ್ಷಣಗಳು ಇದೆಯಾ ಎಂದು ಖಚಿತ ಪಡಿಸಿಕೊಳ್ಳಲು ತಪಾಸಣೆಗೆ ಒಳಗಾಗಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಅಣ್ಣಾಮಲೈ ಇಷ್ಟು ದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿ ಆಗಿದ್ದರು. ಅರವಕುರಿಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಕಣಕ್ಕೆ ಇಳಿದಿದ್ದು, ಕಳೆದ 6ನೇ ತಾರೀಖು ಮತದಾನ ಮುಕ್ತಾಯವಾಗಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

driving
- Advertisement -

Related news

error: Content is protected !!