Sunday, May 19, 2024
spot_imgspot_img
spot_imgspot_img

ಭಾರತ ಶೀಘ್ರದಲ್ಲಿಯೇ ವಿದ್ಯುತ್ ವಾಹನಗಳ ಉತ್ಪಾದನೆಯಲ್ಲಿ NO.1 ಸ್ಥಾನಕ್ಕೇರಲಿದೆ; ನಿತೀನ್ ಗಡ್ಕರಿ

- Advertisement -G L Acharya panikkar
- Advertisement -

ನವದೆಹಲಿ: ಭಾರತ ಶೀಘ್ರದಲ್ಲಿಯೇ ವಿದ್ಯುತ್ ವಾಹನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ನಂಬರ್ ಒನ್ ಸ್ಥಾನಕ್ಕೆ ಏರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಮುಂದಿನ 6 ತಿಂಗಳಲ್ಲಿ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಉತ್ಪಾದಿಸುವ ಭರವಸೆ ಇದ್ದಿರುವುದಾಗಿ ಇತ್ತೀಚೆಗೆ ನಡೆದ ಅಮೆಜಾನ್ ನ ಸಂಭವ್ ಶೃಂಗ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ವಿದ್ಯುತ್ ವಾಹನಗಳ ತಯಾರಿಕೆಗೆ ಅಗತ್ಯವಾಗಿರುವ ಲಿಥಿಯಂ ಐಯಾನ್ ಉತ್ಪಾದನೆ ಇನ್ನಷ್ಟು ಬಲ ನೀಡಲಿದೆ ಎಂದು ಗಡ್ಕರಿ ತಿಳಿಸಿದರು. ವಿಡಿಯೋ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ವಾಹನಗಳ ತಯಾರಿಕೆಗೆ ಭಾರತದ ಮಹತ್ತರ ಹೆಜ್ಜೆ ಇಡುತ್ತಿರುವುದಾಗಿ ಹೇಳಿದರು.

ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ಸಂಶೋಧಕರು ಲಿಥಿಯಂ ಸಲ್ಫರ್ ಬ್ಯಾಟರಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ ನಂಬರ್ ವನ್ ಸ್ಥಾನಕ್ಕೆ ಏರಲಿದೆ ಎಂದು ಗಡ್ಕರಿ ಈ ಸಂದರ್ಭದಲ್ಲಿ ತಿಳಿಸಿದರು.

- Advertisement -

Related news

error: Content is protected !!