Thursday, June 25, 2026
spot_imgspot_img
spot_imgspot_img

ಮದುವೆಯಾಗುವಂತೆ ಪೀಡಿಸಿದ ಯುವತಿಯನ್ನು ಬರ್ಬರ ಹತ್ಯೆ ಮಾಡಿದ ಪ್ರಿಯಕರ!

- Advertisement -
- Advertisement -

ಹಾವೇರಿ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬಳನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹಾವೇರಿ ಸಮೀಪದ ಕರ್ಜಗಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ವಸತಿ ಶಾಲೆ ಸಮೀಪದ ರೇಷ್ಮೆ ಇಲಾಖೆಗೆ ಸೇರಿದ ಹಾಳುಬಿದ್ದ ಕಟ್ಟಡದ ಬಳಿ ಘಟನೆ ನಡೆದಿದೆ. ಕೌದಿಕಲ್ಲಾಪುರದ 21 ವರ್ಷದ ಯುವತಿಯನ್ನು ಪರಿಚಯಿಸಿಕೊಂಡಿದ್ದ ಯತ್ತಿನಹಳ್ಳಿ ಗ್ರಾಮದ ಕರಬಸಪ್ಪ ಮದುವೆಯಾಗುವುದಾಗಿ ನಂಬಿಸಿದ್ದ.

ಬುಧವಾರ ಸಂಜೆ ಕರಿಬಸಪ್ಪನ ಮನೆಗೆ ಹೋದ ಯುವತಿ ಹಣ ಕೊಡು, ಮದುವೆಯಾಗು ಎಂದು ಆತನಿಗೆ ಪೀಡಿಸಿದ್ದಾರೆ. ಹೇಳದೆ ಕೇಳದೆ ಮನೆಗೆ ಬಂದಿದ್ದಕ್ಕೆ ಆಕ್ರೋಶಗೊಂಡ ಕರಿಬಸಪ್ಪ ಬೈಕ್ ನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದ 24 ಗಂಟೆಯೊಳಗೆ ಹಾವೇರಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!