Thursday, September 3, 2026
spot_imgspot_img
spot_imgspot_img

ಉಡುಪಿ: ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ!

- Advertisement -
- Advertisement -

ಉಡುಪಿ: ನಗರಸಭೆ ವ್ಯಾಪ್ತಿಯ ಸ್ವಚ್ಛತಾ ಕಾರ್ಮಿಕರೊಬ್ಬರ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಮೂವರು ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ್‌ (32) ಹಲ್ಲೆಗೊಳ್ಳಗಾದ ಸ್ವಸಹಾಯ ಗುಂಪಿನ ಸ್ವಚ್ಛತಾ ಕಾರ್ಮಿಕ.

ಇವರು ಸಹಾಯಕ ಮಂಜು ಅವರೊಂದಿಗೆ ಜನಾರ್ದನ ಹೈಟ್ಸ್‌ ಕಟ್ಟಡದ ಸಮೀಪ ಕಸ ವಿಲೇವಾರಿ ವಾಹನದ ಮೂಲಕ ತೆರಳುತ್ತಿದ್ದರು. ಆ ಸಂದರ್ಭ ಹಿಂದಿನಿಂದ ಬಂದ ಒಬ್ಬ ಯುವಕ ಹಾಗೂ ಇಬ್ಬರು ಯುವತಿಯರು ಸುರೇಶ್‌ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

driving
- Advertisement -

Related news

error: Content is protected !!