- Advertisement -
- Advertisement -
ವಿಟ್ಲ: ರಾಜ್ಯಾದ್ಯಂತ ವಾರಂತ್ಯ ಕರ್ಫ್ಯೂ ನಿಗದಿಯಾಗಿದ್ದು, ಕಠಿಣ ನಿಯಮಕ್ಕೆ ವಿಟ್ಲ ಸಂಪೂರ್ಣ ಬೆಂಬಲ ನೀಡಿದೆ.
ಬೆಳಗ್ಗೆ 10ರ ತನಕ ದಿನಸಿ ಅಂಗಡಿ, ಆಟೋ , ಮೆಡಿಕಲ್, ಹೀಗೆ ಕೆಲವು ದಿನನಿತ್ಯ ಅಗತ್ಯ ಸೇವೆಗಳಿಗೆ ಅನುಮತಿ ಇತ್ತು. ಹಾಗೇ ವಿಟ್ಲ ಪೇಟೆಯಲ್ಲಿ 10ರ ನಂತರ ಎಲ್ಲವೂ ಬಂದ್. ಜನರು ಅನಗತ್ಯವಾಗಿ ಓಡಾಡದೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದಾರೆ.
ಜನಸಂಚಾರ, ವಾಹನ ಸಂಚಾರ ಸ್ತಬ್ಧಗೊಂಡಿದ್ದು, ಆಸ್ಪತ್ರೆ, ಮೆಡಿಕಲ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪೊಲೀಸರು ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದು, ಸುಖಾಸುಮ್ಮನೆ ಓಡಾಡುವ ಜನರು, ವಾಹನಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಒಟ್ಟಾರೆ ವಾರಂತ್ಯದ ಕರ್ಪ್ಯೂ ಕ್ರಮಕ್ಕೆ ವಿಟ್ಲ ಜನರು ಉತ್ತಮ ಬೆಂಬಲ ನೀಡುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಯಂ ನಿರ್ಬಂಧ ಹಾಕಿಕೊಂಡು ಸರಕಾರಕ್ಕೆ ಸಾಥ್ ನೀಡುತ್ತಿದ್ದಾರೆ.
- Advertisement -