- Advertisement -
- Advertisement -
ಪಟ್ನಾ: ಏಳೇಳು ಜನ್ಮ ಜತೆಯಾಗಿ ಬದುಕುವ ಪ್ರಮಾಣ ಮಾಡಿ ಮದುವೆಯಾಗಿದ್ದ ಗಂಡ ಹೆಂಡತಿಯನ್ನು ಕೊಲೆ ಮಾಡಿ ತಾನೂ ಬಿಲ್ಡಿಂಗ್ನಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಕಾರಣ ಆತನ ಹೆಂಡತಿ ಕರೊನಾ ಸೋಂಕಿಗೆ ತುತ್ತಾಗಿದ್ದು ಎನ್ನಲಾಗಿದೆ.
ಅತುಲ್ ಲಾಲ್ ಹೆಸರಿನ ವ್ಯಕ್ತಿ ಪಟ್ನಾದ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಪತ್ನಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಅದಾದ ಮೇಲೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಅದೇ ಸಿಟ್ಟಿನಿಂದ ಕೋವಿಡ್ ಪಾಸಿಟಿವ್ ಹೆಂಡತಿಯ ಕುತ್ತಿಗೆಯನ್ನು ಅತುಲ್ ಲಾಲ್ ಬ್ಲೇಡ್ನಿಂದ ಕತ್ತರಿಸಿದ್ದಾನೆ. ನಂತರ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಅಘಾತಕಾರಿ ವಿಚಾರ ಏನೆಂದರೆ ಈ ದಂಪತಿಗೆ ಮಕ್ಕಳಿದ್ದು, ಅವರ ಎದುರೇ ಈ ಕೃತ್ಯ ನಡೆದಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
- Advertisement -