




ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ವಿಟ್ಲ ಇದರ ವಾರ್ಷಿಕ ಮಹಾಸಭೆಯು ಕಂಪೆನಿಯ ಕಚೇರಿಯಲ್ಲಿ ಅಧ್ಯಕ್ಷ ರಾಜಾರಾಮ ಭಟ್ ಎಲ್ ಜಿ ಬಳಿಪಗುಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಿಂಗಾರ ಕಂಪನಿಯು ಅಡಿಕೆ ತೆಂಗು ಕೊಯ್ಲು, ಮದ್ದು ಸಿಂಪಡನೆ, ಹುಲ್ಲು ತೆಗೆಯುವುದು, ಅಡಿಕೆ ಕರೀದಿ, ಸುಳಿಯುವುದು, ಬಾಳೆ ಗೊನೆ, ಹಲಸು ಕರೀದಿ ಮತ್ತು ಮೌಲ್ಯ ವರ್ಧನೆ ಮಾಡುತ್ತಿದೆ. ಇನ್ನು ತೆಂಗಿನ ಕಾಯಿಯಿಂದ ಡೆಸಿಕೇಟೆಡ್ ಕೊರೊನೆಟ್ ಪೌಡರ್, ಹಲಸಿನ ಹಣ್ಣಿನ ಐಸ್ ಕ್ರೀಂ ಮಾಡಿ ಮಾರಾಟ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿರ್ದೇಶಕ ರಾದ ರಮೇಶ್ ಎನ್, ಕೃಷ್ಣಮೂರ್ತಿ ಕೆ, ಪುಷ್ಪಾ ಎಸ್ ಕಾಮತ್, ಪ್ರೇಮಲತಾ ಯು, ಸಾಯಿಗೀತಾ ಸಿ ಹೆಚ್, ಚಂದ್ರಶೇಖರ ಕೆ ಜಿ, ಶ್ಯಾಮ್ ಸುಂದರ್ ಎನ್, ಪ್ರಕಾಶ್ ವಿ, ಗಣೇಶ್ ಕೆ ಎಂ ಮತ್ತು ರಜಿತ್ ಕುಮಾರ್, ಸದಸ್ಯ ರಾದ ಮೇಘಶ್ಯಾಂ, ಸೀತಾರಾಮ ಶೆಟ್ಟಿ, ವಿಶ್ವನಾಥ ಭಟ್, ರಾಮಕೃಷ್ಣ ಭಟ್ ಶಾಂತಿಗೋಡು, ನೀಲಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ನಿರ್ದೇಶಕ ರಾದ ಜಯರಾಮ ರೈ ಮತ್ತು ರಾಲ್ಫ್ ಡಿ ಸೋಜಾ ಇವರನ್ನು ಗೌರವಿಸಲಾಯಿತು. ನೂತನ ನಿರ್ದೇಶಕ ರಾಗಿ ರಾಮ್ ಕಿಶೋರ್ ಮಂಚಿ, ವಿಶ್ವನಾಥ ಅಳಿಕೆ ಮತ್ತು ಕೇಶವ ಶೆಟ್ಟಿ ಕೆಳಿಂಜ ಇವರನ್ನು ಆಯ್ಕೆ ಮಾಡಲಾಯಿತು.

ಜಯರಾಮ ರೈ ಸ್ವಾಗತಿಸಿದರು. ಕಂಪೆನಿಯ ಮುಖ್ಯ ಕಾನಿರ್ವಹಣ ಅಧಿಕಾರಿ ಪ್ರದೀಪ್ ಎಸ್ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ರಾಲ್ಫ್ ಡಿ ಸೋಜಾ ವಂದಿಸಿದರು. ಜನಾರ್ದನ ಪದ್ಮಶಾಲಿ ನಿರೂಪಿಸಿದರು.








