- Advertisement -
- Advertisement -
ಮೈಸೂರು: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ನಗರದ ಶ್ರೀರಾಂಪುರ ಎಸ್‌ಬಿಎಂ ಕಾಲನಿಯಲ್ಲಿ ನಡೆದಿದೆ.

ಆಶಾರಾಣಿ (28) ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ನಿವಾಸಿ. ಕೇವಲ ಒಂದು ತಿಂಗಳ ಹಿಂದಷ್ಟೇ ಟಿಕ್ಕಿ ಪ್ರದೀಪ್ ಎಂಬಾತನ ಜತೆ ವಿವಾಹವಾಗಿತ್ತು.

ಮೃತ ಆಶಾರಾಣಿ ಪೋಷಕರು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವರದಕ್ಷಿಣೆ ತರುವಂತೆ ಮಾನಸಿಕ ದೈಹಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಂದು ಪ್ರದೀಪ್ ವಿರುದ್ಧ ದೂರು ದಾಖಲಾಗಿದೆ.

5 ಲಕ್ಷ ರೂ. ನಗದು ಮತ್ತು 130 ಗ್ರಾಂ ಚಿನ್ನ ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ, ಮತ್ತಷ್ಟು ವರದಕ್ಷಿಣೆಗಾಗಿ ಪ್ರದೀಪ್, ಮತ್ತವರ ಕುಟುಂಬದ ಬೇಡಿಕೆ ಇಟ್ಟಿತ್ತು ಎಂದು ಆಶಾರಾಣಿ ಕುಟುಂಬ ಆರೋಪಿಸಿದ್ದು, ಪ್ರದೀಪ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



- Advertisement -