Friday, June 19, 2026
spot_imgspot_img
spot_imgspot_img

ಕಾಣಿಯೂರು: ಬೈಕ್‌ಗಳ ನಡುವೆ ಅಪಘಾತ; ಪಾದಾಚಾರಿ ಮಹಿಳೆ ಮೃತ್ಯು..!

- Advertisement -
- Advertisement -

ಕಾಣಿಯೂರು: ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಹಾಲಿನ ಡೈರಿಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಸಾವನ್ನೊಪ್ಪಿದ ಘಟನೆ ಕಾಣಿಯೂರು ಸಮೀಪದ ಬರೆಪ್ಪಾಡಿ ಎಂಬಲ್ಲಿ ನಡೆದಿದೆ.

ಮೃತಪಟ್ಟ ಮಹಳೆ ಬರೆಪ್ಪಾಡಿ‌ ನಿವಾಸಿ ನಾರಾಯಣ ಭಟ್ ಎಂಬವರ ಪತ್ನಿ ವೈಶಾಲಿ (45) ಎಂದು ಗುರುತಿಸಲಾಗಿದೆ.

ತನ್ನ ಮನೆಯಿಂದ ಹಾಲಿನ ಡೈರಿಗೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ಗಳೆರಡು ಅಪಘಾತವಾಗಿದೆ. ಒಂದು ಬೈಕ್ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಪಾದಾಚಾರಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

- Advertisement -

Related news

error: Content is protected !!