Friday, October 16, 2026
spot_imgspot_img
spot_imgspot_img

ದೇಶದಲ್ಲಿ ತುರ್ತಾಗಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ, ಆಕ್ಸಿಜನ್ , ಲಸಿಕೆ ಉತ್ಪಾದನೆ ಹೆಚ್ಚಿಸಿ: ರಾಕೇಶ್ ಬಿರ್ತಿ

- Advertisement -
- Advertisement -

✍️ ರಾಕೇಶ್ ಬಿರ್ತಿ

ಕೋವಿಡ್ ನ ಎರಡನೇಯ ಅಲೆಯು ದೇಶದಲ್ಲಿ ಭೀಕರತೆಯನ್ನು ಸೃಷ್ಟಿಸುತ್ತಿದ್ದು , ಸರಕಾರವು ಈಗಾಗಲೇ ಕೊರೋನಾ ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ, ಆದರೆ ಪ್ರಧಾನಿ ಮೋದಿಯವರು ತುರ್ತಾಗಿ ದೇಶದಲ್ಲಿರುವ ಎಲ್ಲಾ ಆಕ್ಸಿಜನ್ ಪ್ಲಾಂಟ್ ಗಳಿಂದ ಲಭ್ಯವಿರುವ ಆಕ್ಸಿಜನ್ ಗಳನ್ನು ಸಂಗ್ರಹಿಸಿ ಆಯಾ ರಾಜ್ಯಗಳಿಗೆ ತಲುಪಿಸುವಲ್ಲಿ ಸೂಕ್ತ ಕ್ರಮವನ್ನು ವಹಿಸಬೇಕು.

ದೇಶದಲ್ಲಿ ಲಸಿಕೆ ಉತ್ಪಾದಿಸಲು ಮುಂದಾಗಬೇಕು. ಲಭ್ಯವಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಮತ್ತು ದೇಶದ ಲಸಿಕಾ ತಯಾರಿಕಾ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ ಅವರಿಗೆ ಲಸಿಕೆ ತಯಾರಿಕೆಗೆ ಎದುರಾಗುವ ಕೆಲವೊಂದು ಕಾನೂನು ತೊಡಕುಗಳನ್ನು ನಿವಾರಿಸಿ ಕೊಡಬೇಕು.

ದೇಶದ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಎರಡನೆಯ ಅಲೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ. ತಾತ್ಕಾಲಿಕವಾಗಿ ಹೆಚ್ಚುವರಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯುವ ಮೂಲಕ ಕೋರೋನಾ ಸೋಂಕಿತರಿಗೆ ಬೆಡ್ ಸಿಗುವಂತೆ ನೋಡಿಕೊಳ್ಳಲು ಮುಂದಾಗಬೇಕು.

- Advertisement -

Related news

error: Content is protected !!