Friday, June 26, 2026
spot_imgspot_img
spot_imgspot_img

ಕಾರ್ಕಳ: ಮದ್ಯದ ಮತ್ತಿನಲ್ಲಿ ಜಗಳ ತಾರಕಕ್ಕೇರಿ ಓರ್ವನ ಹತ್ಯೆ!

- Advertisement -
- Advertisement -

ಕಾರ್ಕಳ: ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ಕುಡಿತದ ಮತ್ತಿನಲ್ಲಿ ಇಬ್ಬರು ಜಗಳಕ್ಕಿಳಿದು ಓರ್ವ ಹತ್ಯೆಯಾದ ಘಟನೆ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್‌ ಪೂಜಾರಿ (42) ಎಂದು ಗುರುತಿಸಲಾಗಿದೆ. ಗುರುವ ಎಂಬಾತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 7 ತಿಂಗಳಿನಿಂದ ಮಾಳದ ರೀತಾ ಎಂಬಾಕೆಯ ಮನೆಯಲ್ಲಿ ಹರೀಶ್‌ ಪೂಜಾರಿ ಹಾಗೂ ಗುರುವ ಒಟ್ಟಿಗೆ ಇದ್ದು, ಇಬ್ಬರೂ ವಿವಾಹಿತರಾಗಿದ್ದರೂ ವಿವಾಹಿತ ಮಹಿಳೆ ರೀತಾಳೊಂದಿಗೆ ಜೀವನ ನಡೆಸುತ್ತಿದ್ದರು. ಹರೀಶ್‌ ವಿದ್ಯುತ್‌ ಕಂಬ ಹಾಕುವ ಕೆಲಸ ಮಾಡಿಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ರವಿವಾರ ರಾತ್ರಿ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಗುರುವ ಮಾರಕಾಯುಧದಿಂದ ಹರೀಶ್‌ ಅವರಿಗೆ ಚುಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ತೇಜಸ್ವಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದು, ಇಲ್ಲಿನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!