Tuesday, April 30, 2024
spot_imgspot_img
spot_imgspot_img

ಸಿಬಿಐಯ ನೂತನ ನಿರ್ದೇಶಕರ ಆಯ್ಕೆ: ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ, ಕಾಂಗ್ರೆಸ್ ಅಪಸ್ವರ

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ ಸಿಬಿಐಯ ನೂತನ ನಿರ್ದೇಶಕರ ಆಯ್ಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ.

ಮುಖ್ಯನ್ಯಾಯಮೂರ್ತಿ ಕೆ. ವಿ. ರಮಣ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಅದಿರ್ ರಂಜನ್ ಚೌಧುರಿ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿಗಳಾದ ಹೆಚ್ ಕೆ ಅವಸ್ತಿ, ಕೆ. ಆರ್. ಚಂದ್ರ ಮತ್ತು ವಿ ಎಸ್ ಕೆ. ಕೌಮುದಿ ಅವರ ಹೆಸರನ್ನು ಹುದ್ದೆಗೆ ಪರಿಗಣಿಸಲಾಗಿದೆ ಎಂದು ವರದಿಯಾಗಿದೆ. ಈ ಮೂವರು ಅಧಿಕಾರಿಗಳಲ್ಲಿ ಒಬ್ಬರನ್ನು ಸಿಬಿಐ ನಿರ್ದೇಶಕರಾಗಿ ಸರ್ಕಾರ ನೇಮಕ ಮಾಡಲಿದೆ.

ಇದೇ ವೇಳೆ ಆಯ್ಕೆ ಪ್ರಕ್ರಿಯೆ ಕುರಿತಂತೆ ಅದಿರ್ ರಂಜನ್ ಚೌಧರಿ ಅಪಸ್ವರ ಎತ್ತಿದ್ದಾರೆ. ಮೇ 11 ರಂದು 108 ಅಧಿಕಾರಿಗಳ ಪಟ್ಟಿ ನನಗೆ ನೀಡಲಾಗಿತ್ತು. ಈ ಪಟ್ಟಿ ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿಲ್ಲ. ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಯತ್ನಿಸಲಾಗುತ್ತಿದೆ. ಇದಕ್ಕೆ ನನ್ನ ಸಹಮತ ಇಲ್ಲ ಎಂದು ಹೇಳಿದ್ದಾರೆ

- Advertisement -

Related news

error: Content is protected !!