- Advertisement -
- Advertisement -
ವಿಟ್ಲ: ಆರ್. ಕೆ ಕ್ರಿಯೇಷನ್ ವಿಟ್ಲ ಅರ್ಪಿಸುವ ನಮ್ಮ ಜನ ನಮ್ಮ ಹೆಮ್ಮೆ ಯ್ಯೂಟೂಬ್ ಚಾನಲ್ ಶುಭಾರಂಭಗೊಂಡಿದ್ದು, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದಲ್ಲಿ ನೇರಪ್ರಸಾರದ ಮೂಲಕ ಚಾಲನೆ ನೀಡಲಾಯಿತು.
ವಿದ್ವಾನ್ ಡಾ.ಪಿ.ಕೆ ದಾಮೋದರ್ ಪುತ್ತೂರು ಹಾಗೂ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರು ಉದ್ಘಾಟಿಸಿ ಶುಭಹಾರೈಸಿದರು.
ವಿದ್ವಾನ್ ಡಾ.ಪಿ.ಕೆ ದಾಮೋದರ್ ಪುತ್ತೂರು ಇವರ ಶಿಷ್ಯೆಯಾದ ಅನ್ವಿತಾ ವಿಟ್ಲ ಇವರ ಸುಂದರವಾದ ಸ್ಯಾಕ್ಯೋಫೋನ್ ವಾದನದ ಮೂಲಕ ಮೊದಲ ನೇರಪ್ರಸಾರದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಪ್ರವೀಣ್ ಜಯ ವಿಟ್ಲ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
- Advertisement -