Wednesday, June 17, 2026
spot_imgspot_img
spot_imgspot_img

ಮದುವೆಯಾಗಿ ನಂಬಿಸಿ ದೈಹಿಕ ಸಂಪರ್ಕ; ಕಂಗಾನಾ ರಾಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್

- Advertisement -
- Advertisement -

ಮಂಡ್ಯ: ಬಾಲಿವುಡ್ ನಟಿ ಕಂಗಾನಾ ರಾಣಾವತ್ ಅವರ ಬಾಡಿಗಾರ್ಡ್ ಆಗಿ ಕೆಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದ ಕುಮಾರ್ ಹೆಗ್ಡೆ ಈಗ ಮುಂಬೈ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈ ನಲ್ಲಿ ಒಂದು ಹುಡುಗಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಕೈ ಕೊಟ್ಟು ಬೇರೆ ಹುಡುಗಿಯನ್ನು ಮುದುವೆಯಾಗಲು ಸಜ್ಜಾಗಿದ್ದನು.

ಇದನ್ನು ಮಹಾರಾಷ್ಟ್ರ ರಾಜ್ಯದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಂದೇರಿ ಪೆÇಲೀಸರು ಆರೋಪಿ ಹೆಗ್ಗಡಹಳ್ಳಿ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದರು.

ಆದರೆ ಕುಮಾರ್ ಮುಂಬೈ ನಿಂದ ಕಳೆದ ಒಂದು ತಿಂಗಳ ಹಿಂದೆಯೇ ಲಾಕ್ ಡೌನ್ ನೆಪದಲ್ಲಿ ತಮ್ಮ ಗ್ರಾಮವಾದ ಕಸಬಾ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿ ತಲೆ ಮರೆಸಿಕೊಂಡು ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದನು. ಈ ವಿಚಾರವು ಮುಂಬೈನಲ್ಲಿ ಕುಮಾರ್ ನಿಂದ ಅನ್ಯಾಯಕ್ಕೆ ಒಳಗಾಗಿದ್ದ ಯುವತಿ ಅಂದೇರಿ ಪೊಲೀಸರಿಗೆ ದೂರು ನೀಡಿದ್ದಳು.

ಈ ಹಿನ್ನೆಲೆಯಲ್ಲಿ ಇಂದು ಮುಂಬೈ ನಗರದ ಆಂದೇರಿ ಪೆÇೀಲೀಸ್ ಠಾಣೆಯ ಕ್ರೈಂ ವಿಭಾಗದ ಅಧಿಕಾರಿಗಳು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸರ ಸಹಕಾರದೊಂದಿಗೆ ಆರೋಪಿ ಕುಮಾರ್ ಹೆಗ್ಡೆಯನ್ನು ಈತನನ್ನು ವಶಕ್ಕೆ ಪಡೆದಿದ್ದು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

- Advertisement -

Related news

error: Content is protected !!