Sunday, August 9, 2026
spot_imgspot_img
spot_imgspot_img

ಅರ್ಧಕ್ಕೆ ನಿಂತಿದ್ದ IPL ಪುನಾರಂಭಕ್ಕೆ ಡೇಟ್ ಫಿಕ್ಸ್!

- Advertisement -
- Advertisement -

ನವದೆಹಲಿ: ಕೋವಿಡ್ ಹಿನ್ನಲೆಯಲ್ಲಿ ಅರ್ಧಕ್ಕೆ ನಿಂತಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್‌ 19 ರಿಂದ ಯುನೈಟೆಡ್‌ ಅರಬ್‌ ಎಮಿರೈಟ್ಸ್‌ (ಯುಎಇ) ಆತಿಥ್ಯದಲ್ಲಿ ಪುನಾರಂಭವಾಗಲಿದೆ.

IPL 14 ನೇ ಆವೃತ್ತಿಯ ಟೂರ್ನಿಯು ಸೆಪ್ಟೆಂಬರ್‌ 19 ರಿಂದ ಯುಎಇ ನಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಹಿನ್ನೆಲೆಯಲ್ಲಿ ಮೇ 4 ರಂದು ಟೂರ್ನಿಯನ್ನು ಐಪಿಎಲ್ ಟೂರ್ನಿಯನ್ನು ಮುಂದೂಡಿಕೆ ಮಾಡಲಾಗಿತ್ತು. ಇನ್ನು, ಸೆಪ್ಟೆಂಬರ್ 19 ರಂದು ಪಂದ್ಯಗಳು ಆರಂಭವಾಗಲಿದ್ದು ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆ ಇದೆ. ಹಾಗಾಗಿ ಸಮತೋಲಿತ ತಂಡ ಕಣಕ್ಕಿಳಿಸಲು ಪ್ರಾಂಚೈಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

- Advertisement -

Related news

error: Content is protected !!