Friday, June 26, 2026
spot_imgspot_img
spot_imgspot_img

ಲಾಕ್‍ಡೌನ್ ಪರಿಣಾಮ: ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು

- Advertisement -
- Advertisement -

ಈ ಲಾಕ್‍ಡೌನ್ ಅವಧಿಯಲ್ಲಿ ನಮ್ಮೂರುಗಳು ಎಂದಿಗಿಂತ ಹೆಚ್ಚು ಶಾಂತಯುತವಾಗಿರುವ ಕಾರಣ ಪ್ರಕೃತಿಯಲ್ಲಿರುವ ಇತರೆ ಜೀವಿಗಳು ಆರಾಮವಾಗಿ ಹೊರ ಬಂದು ಅಡ್ಡಾಡುತ್ತಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ.

ಇಂಥದ್ದೇ ಘಟನೆಯೊಂದರಲ್ಲಿ, ಮುಂಬೈನ ಅಪಾರ್ಟ್‍ಮೆಂಟ್ ಒಂದರ ಬಾಲ್ಕನಿಯಲ್ಲಿ ಅಪರೂಪದ ತಳಿಯ ಎರಡು ಪಕ್ಷಿಗಳು ಬಂದು ಕುಳಿತಿರುವ ವಿಡಿಯೋವೊಂದು ವೈರಲ್ ಆಗಿದೆ.

ವೈದ್ಯ ರಾಹುಲ್ ಬಕ್ಸಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಇಂಡಿಯನ್ ಗ್ರೇ ಹಾರ್ನ್‍ಬಿಲ್ ಎಂಬ ಹೆಸರಿನ ಈ ಪಕ್ಷಿಗಳು ಲಾಕ್‍ಡೌನ್ ನಿಶಬ್ಧತೆಯಿಂದಾಗಿ ನಗರದ ವಸತಿ ಪ್ರದೇಶಕ್ಕೆ ಬಂದಿವೆ. “ಗುಡ್ ಮಾನಿರ್ಂಗ್. ಈ ಪಕ್ಷಿಗಳು ಯಾವುವೆಂದು ಗೆಸ್ ಮಾಡಿ. ಮಾತುಂಗಾದಲ್ಲಿರುವ ನಮ್ಮ ಹಿರಿಯ ವೈದ್ಯರೊಬ್ಬರ ಮನೆಯಲ್ಲಿ ಈ ಪಕ್ಷಿಗಳು ಕಂಡುಬಂದಿವೆ” ಎಂದು ರಾಹುಲ್ ತಿಳಿಸಿದ್ದಾರೆ.

- Advertisement -

Related news

error: Content is protected !!