ಪುತ್ತೂರು: ಮಾಜಿ ಸಚಿವ , ಜೆಡಿಎಸ್ ನ ಹಿರಿಯ ನಾಯಕ ಎಚ್.ಡಿ ರೇವಣ್ಣ ಖಾಸಗಿ ನರ್ಸಿಂಗ್ ಹೋಮ್ಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದರ ವಿರುದ್ಧ ಐ.ಎಂ.ಎ ಡಾ.ಗಣೇಶ್ ಪ್ರಸಾದ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ರೇವಣ್ಣ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ” ಖಾಸಗಿ ನರ್ಸಿಂಗ್ ಹೋಂಗಳು ಕೋವಿಡ್ ಸಾಂಕ್ರಾಮಿಕ ರೋಗದ ಕಷ್ಟದ ಸಮಯದಲ್ಲಿಯೂ ದಂಧೆ ನಡೆಯುತ್ತಿದ್ದು, ಸುಲಿಗೆ ನಿಲ್ಲಿಸದಿದ್ದರೆ ಸಾರ್ವಜನಿಕರನ್ನು ಪ್ರಚೋದಿಸುತ್ತೇವೆ ಹಾಗೂ ಜನರಿಗೆ ಹೇಳಿ ಹೊಡೆಸುತ್ತೇನೆ. ಈ ಆಸ್ಪತ್ರೆಗಳ ವಿರುದ್ಧ ಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ, ನಾನು ಸುಮ್ಮನಿರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ ನರ್ಸಿಂಗ್ ಹೋಮ್ ಗಳ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸದಸ್ಯ ಡಾ.ಗಣೇಶ್ ಪ್ರಸಾದ್ ಮುದ್ರಾಜೆ ಅವರು ಪುತ್ತೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.