Monday, June 8, 2026
spot_imgspot_img
spot_imgspot_img

ಮಾಜಿ ಕೇಂದ್ರ ಸಚಿವರ ಪತ್ನಿಯ ಬರ್ಬರ ಹತ್ಯೆ!

- Advertisement -
- Advertisement -

ನವದೆಹಲಿ: ಕೇಂದ್ರದ ಮಾಜಿ ಸಚಿವ, ದಿವಂಗತ ಪಿ.ಆರ್. ಕುಮಾರಮಂಗಲಂ ಅವರ ಪತ್ನಿಯನ್ನು ಮಂಗಳವಾರ ರಾತ್ರಿ ದೆಹಲಿಯ ನಿವಾಸದಲ್ಲಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತಪಟ್ಟವರು ಕಿಟ್ಟಿ ಕುಮಾರಮಂಗಲಂ (67). ಪಿ.ಆರ್. ಕುಮಾರಮಂಗಲಂ ಅವರ ಪತ್ನಿ ವಸಂತ್ ವಿಹಾರದಲ್ಲಿ ವಾಸವಿದ್ದರು.

ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಕಿಟ್ಟಿ ಕುಮಾರಮಂಗಲಂ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ರಾಜು ಎಂಬಾತ ಮತ್ತಿಬ್ಬರು ಸಹ ಕೆಲಸಗಾರರೊಂದಿಗೆ ಮನೆಗೆ ಬಂದಿದ್ದ. ಈ ವೇಳೆ ಕಿಟ್ಟಿ ಕುಮಾರಮಂಗಲಂ ಅವರ ಸಹಾಯಕಿ ಮಂಜು ಎಂಬಾಕೆಯನ್ನು ಕೋಣೆಯೊಳಗೆ ಕಟ್ಟಿ ಹಾಕಿ ಬಳಿಕ ಕಿಟ್ಟಿ ಕುಮಾರಮಂಗಲಂ ಅವರ ಮೇಲೆ ಹಲ್ಲೆ ಮಾಡಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮತ್ತಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.

- Advertisement -

Related news

error: Content is protected !!