Monday, August 31, 2026
spot_imgspot_img
spot_imgspot_img

ಡಿಜಿ ಲಾಕರ್ ಹಾಗೂ ಎಂಪರಿವಾಹನ್ ಆ್ಯಪ್​ಗಳ ಮೂಲಕವೇ ಪೊಲೀಸರಿಗೆ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬುಕ್ ತೋರಿಸಿ; ಇನ್ನು ಮುಂದೆ ಭೌತಿಕ ದಾಖಲೆ ಅಗತ್ಯವಿಲ್ಲ

- Advertisement -
- Advertisement -

ಬೆಂಗಳೂರು: ಕೇಂದ್ರ ಸರ್ಕಾರ ಡಿಜಿ ಲಾಕರ್ ಹಾಗೂ ಎಂಪರಿವಾಹನ್ ಆ್ಯಪ್​ಗಳನ್ನು ಸಾರ್ವಜನಿಕರು ಬಳಸಬಹುದು. ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬುಕ್ ಸೇರಿದಂತೆ ಹಲವು ದಾಖಲೆಗಳನ್ನು ಡಿಜಿ‌ ಲಾಕರ್​ನಲ್ಲಿ ತೋರಿಸಬಹುದು.

ಇನ್ನು ಮುಂದೆ ಭೌತಿಕ ಸ್ವರೂಪದಲ್ಲೇ ಅಗತ್ಯ ದಾಖಲಾತಿಗಳನ್ನು ಪೊಲೀಸರಿಗೆ ತೋರಿಸುವ ಅಗತ್ಯ ಇಲ್ಲ. ಡಿಜಿ ಲಾಕರ್ ಅಥವಾ ಎಂ ಪರಿವಾಹನ್ ನಲ್ಲಿ ತೋರಿಸಬಹುದು ಎಂದು ಬೆಂಗಳೂರಿನಲ್ಲಿ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.

ಪೊಲೀಸರು ಕೂಡ ಭೌತಿಕವಾಗಿ ದಾಖಲಾತಿಗಳನ್ನು ತೋರಿಸುವಂತೆ ಒತ್ತಾಯ ಮಾಡುವಂತಿಲ್ಲ. ಪೊಲೀಸರಿಗೂ ಕೂಡ ಈಗಾಗಲೇ ಸೂಚನೆ ನೀಡಲಾಗಿದೆ. ಪೊಲೀಸರು ಭೌತಿಕವಾಗಿ ತೋರಿಸುವಂತೆ ಒತ್ತಾಯ ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ವಾಹನ ಸವಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ರವಿಕಾಂತೇಗೌಡ ತಿಳಿಸಿದರು.

- Advertisement -

Related news

error: Content is protected !!