- Advertisement -
- Advertisement -
ಕಾರ್ಕಳ: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಂಕಲ ಕರಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿಗಳು ಉತ್ತರ ಪ್ರದೇಶ ಮೂಲದ ಟೈಲ್ಸ್ ಕೆಲಸ ಮಾಡುವ ಕಾರ್ಮಿಕ ತೌಶಿಪ್ ಮತ್ತು ತನ್ವೀರ್ ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿ ಕಡೆಯಿಂದ ಮುಂಡ್ಕೂರು ಕಡೆ ಸಾಗುತ್ತಿದ್ದ ಕಾರು ಮುಂಡ್ಕೂರಿನಿಂದ ಸುರತ್ಕಲ್ ಕಡೆ ಸಾಗುತ್ತಿದ್ದ ಬೈಕ್ ಗಳ ನಡುವೆ ಈ ಅವಘಡ ಸಂಭವಿಸಿದೆ. ಕಾರು ಚಾಲಕ ತಿರುವಿನಲ್ಲಿ ಕಾರನ್ನು ವಿರುದ್ಧ ದಿಕ್ಕಿಗೆ ಚಲಾಯಿಸಿದ ಪರಿಣಾಮ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಚರಂಡಿಗೆ ಬಿದ್ದಿದೆ. ತಕ್ಷಣವೇ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹಾಗೂ ಬೈಕ್ ಮುಂಭಾಗ ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
- Advertisement -