Thursday, July 3, 2025
spot_imgspot_img
spot_imgspot_img

ಜೊತೆ ಜೊತೆಯಲಿ ಸೀರಿಯಲ್‌ಗೆ ಮೇಘ ಶೆಟ್ಟಿ ಗುಡ್‌ ಬೈ..! ಕಾರಣ ಏನು ಗೊತ್ತಾ?

- Advertisement -
- Advertisement -

ಕನ್ನಡ ಇಂಡಸ್ಟ್ರಿಯ ಹಿಟ್‌ ಸೀರಿಯಲ್ ಅಂದ್ರೆ ನೆನಪಾಗೋದೇ ಜೊತೆ ಜೊತೆಯಲಿ. ಈ ಧಾರವಾಹಿ ಮಾಡಿರೋ ಇಂಪ್ಯಾಕ್ಟ್ ಅಷ್ಟಿಷ್ಟಲ್ಲ. ಆರ್ಯವರ್ಧನ್ ಹಾಗೂ ಅನು ಸಿರಿ ಮನೆ ಪಾತ್ರ ಮನೆ ಮನೆ ಮಾತಾಗಿದೆ.

ಅನು ಪಾತ್ರ ಮಾಡಿರೋ ಮೇಘಶೆಟ್ಟಿ ಈ ಧಾರವಾಹಿಯ ಮೂಲಕ ಪಾಪ್ಯುಲರ್ ಕೂಡ ಆದರು. ಆದ್ರೆ, ಸೀರಿಯಲ್ ಇಂಡಸ್ಟ್ರಿಯಿಂದ ಒಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಅದೇನಂದ್ರೆ, ಮೇಘ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೌದು, ಮೇಘ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್‌ನ ತ್ಯಜಿಸಿದ್ದಾರೆ. ನಿನ್ನೆ ಅವರು ಜೊತೆ ಜೊತೆಯಲಿ ಸೀರಿಯನ್‌ನಿಂದ ಅಧಿಕೃತವಾಗಿ ಹೊರ ಬಂದಿದ್ದಾರೆ. ನಿನ್ನೆ ಅವರ ಕೊನೆಯ ದಿನ ಶೂಟಿಂಗ್‌ ನಡೆದಿದೆ. ಇನ್ಮುಂದೆ ಅವರು ಶೂಟಿಂಗ್‌ನಲ್ಲಿ ಭಾಗಿಯಾಗೋಲ್ಲ. ಆದ್ರೆ, ಇನ್ನೂ ಕೆಲ ದಿನಗಳು ಅವರು ಅಭಿನಯಿಸಿರೋ ಎಪಿಸೋಡ್ಸ್‌ ಪ್ರಸಾರವಾಗ್ಲಿದೆ. ಈ ತಿಂಗಳ ಕೊನೆಯಲ್ಲಿ ಹೊಸ ಹೀರೋಯಿನ್‌ ಎಂಟ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಜೊತೆ ಜೊತೆಯಲಿ ಸೀರಿಯಲ್ ತಂಡ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ. ಅನು ಪಾತ್ರಕ್ಕೆ ಸೂಟ್ ಆಗೋ ಹೀರೋಯಿನ್ ತಲಾಶೆಯಲ್ಲಿದೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ವೈಯಕ್ತಿಕ ಹಾಗೂ ಸಿನಿಮಾ ಕಾರಣಗಳಿಗಾಗಿ ಮೇಘಶೆಟ್ಟಿ ಸೀರಿಯಲ್ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!