Thursday, October 8, 2026
spot_imgspot_img
spot_imgspot_img

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅಶ್ಲೀಲ ಪದಗಳಿಂದ ಅವಹೇಳನಕಾರಿ ಹೇಳಿಕೆ; ಶ್ರೀ ಕ್ಷೇತ್ರಕ್ಕೆ ಬಂದು ಕಣ್ಣೀರಿಟ್ಟು ಕ್ಷಮೆಯಾಚಿಸಿ ತಪ್ಪೊಪ್ಪಿಕೊಂಡ ಆರೋಪಿ

- Advertisement -
- Advertisement -

ಕಟೀಲು: ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕೆಲವು ದಿನಗಳ ಹಿಂದೆ ಅಶ್ಲೀಲ ಪದಗಳಿಂದ ಅವಹೇಳನ ಮಾಡಿದ ವ್ಯಕ್ತಿಯೋರ್ವ ಕಟೀಲು ಕ್ಷೇತ್ರಕ್ಕೆ ಬಂದು ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಆಲ್ಬರ್ಟ್ ಫೆರ್ನಾಂಡಿಸ್ ಎಂಬಾತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಅಶ್ಲೀಲ ಪದ ಬಳಸಿ ಅವಹೇಳನಕಾರಿ ಹೇಳಿಕೆ ನೀಡಿದ್ದನು.

ಮೂಲತಃ ಬಜ್ಪೆ ನಿವಾಸಿಯಾದ ಈತ ಪ್ರಸ್ತುತ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಈ ಕುರಿತು ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಆಲ್ಬರ್ಟ್ ಫೆರ್ನಾಂಡಿಸ್ ಗೆ ತಾನು ಮಾಡಿದ ತಪ್ಪು ಅರಿವಾಗಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಬಂದು ಕಣ್ಣೀರಿಟ್ಟು ಕ್ಷಮೆಯಾಚಿಸಿ ತಪ್ಪೊಪ್ಪಿಕೊಂಡು ಗೋಗರೆದಿದ್ದಾನೆ.

ಬಳಿಕ ಬಜ್ಪೆ ಠಾಣೆಗೆ ತೆರಳಿ ಈ ಪ್ರಕರಣವನ್ನು ಪರಸ್ಪರ ಪಂಚಾಯಿತಿಗೆಯಲ್ಲಿ ಇತ್ಯರ್ಥಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!