Saturday, June 27, 2026
spot_imgspot_img
spot_imgspot_img

ಮಹಿಳೆಗೆ ಮೊಬೈಲ್‌ ಮೂಲಕ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಆರೋಪ; ಕಚೇರಿಯಲ್ಲಿ ಹಲ್ಲೆ!

- Advertisement -
- Advertisement -

ಕುಷ್ಟಗಿ: ಮಹಿಳೆಯೊಬ್ಬರಿಗೆ ಮೊಬೈಲ್‌ ಮೂಲಕ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಆರೋಪದ ಮೇಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಮಹಿಳೆ ಹೊಸಪೇಟೆ ಮೂಲದವರಾಗಿದ್ದರು. ಬಳ್ಳಾರಿ ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ತನ್ನ ಪತಿ ಹಾಗೂ ಮತ್ತಿತರರೊಂದಿಗೆ ಮಧ್ಯಾಹ್ನ ಕಚೇರಿ ಅವಧಿಯಲ್ಲಿ ಶಿಶು ಅಭಿವೃದ್ಧಿ ಕಚೇರಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮಿಂದ ದಾಂಪತ್ಯ ಸಾಮರಸ್ಯ ಹಾಳಾಗಿದೆ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಮಹಿಳೆ ಸಿಡಿಪಿಒ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಇಲ್ಲಿಯ ಇತರೆ ಇಲಾಖೆಯ ಕೆಲ ನೌಕರರು ಸಂಧಾನ ನಡೆಸಿದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!