Tuesday, July 1, 2025
spot_imgspot_img
spot_imgspot_img

ನಟಿ ಪ್ರಿಯಾಮಣಿ ಮತ್ತು ಪತಿ ಮುಸ್ತಫಾ ವಿರುದ್ಧ ಕ್ರಿಮಿನಲ್ ಕೇಸ್

- Advertisement -
- Advertisement -

ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್​ ಮೂಲಕ ಇಡೀ ದೇಶಕ್ಕೆ ಪರಿಚಯರಾಗಿರೋ ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. 

ಪ್ರಿಯಾಮಣಿ ಮತ್ತು ಅವರ ಪತಿ ಮುಸ್ತಫಾ ರಾಜ್ ವಿರುದ್ಧ, ಸ್ವತಃ ಮುಸ್ತಫಾ ಅವರ ಮೊದಲ ಪತ್ನಿ ಆಯೇಷಾ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಇಲ್ಲಿಯ ತನಕವೂ ನನ್ನ ಜೊತೆ ಕಾನೂನಾತ್ಮಕವಾಗಿ ಮುಸ್ತಫಾ ದೂರ ಆಗಿಲ್ಲ.. ಹೀಗಾಗಿ, ಅವರ ಎರಡನೇ ಮದುವೆ ಅಸಿಂಧು ಆಗಿದೆ ಎಂದು ಅವರು ಆರೋಪಿಸಿದ್ದಾರೆ.

ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫಾ ರಾಜ್ ಮೊದಲನೇ ಹೆಂಡತಿ ಆಯೆಷಾಗೆ ಡಿವೋರ್ಸ್​ ಮಾಡದೇ ಪ್ರಿಯಾಮಣಿಯನ್ನ ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಮುಸ್ತಫಾ ತಮ್ಮ ಮೊದಲ ಪತ್ನಿ ಆಯೆಷಾ ಅವರಿಂದ 2013ರಲ್ಲಿ ದೂರವಾಗಿದ್ದರು. ನಂತರ 2017ರಲ್ಲಿ ಪ್ರಿಯಾಮಣಿ ಅವರನ್ನು ವಿವಾಹವಾದರು. ಮುಸ್ತಫಾ ಮತ್ತು ಆಯೆಷಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಈಗ ಮುಸ್ತಫಾ ವಿರುದ್ಧ ಆಯೆಷಾ ಆರೋಪ ಮಾಡಿದ್ದು, ಕಾನೂನಿನ ಪ್ರಕಾರ ನಾವಿನ್ನೂ ಬೇರ್ಪಟ್ಟಿಲ್ಲ. ನಾನೀಗಲೂ ಅವರ ಪತ್ನಿ. ಆದ್ದರಿಂದ ಪ್ರಿಯಾಮಣಿ ಮತ್ತು ಮುಸ್ತಫಾ ಅವರ ಮದುವೆ ಅಸಿಂಧು ಅಂತ ಹೇಳಿದ್ದಾರೆ. ಆದ್ರೆ, ಮುಸ್ತಫಾ ಇದನ್ನ ನಿರಾಕರಿಸಿದ್ದು, ನಾನು ಹಾಗೂ ಆಯೆಷಾ ಇಬ್ಬರೂ 2010ರಲ್ಲೇ ದೂರ ಆಗಿದ್ವಿ 2013ರಲ್ಲಿ ಡಿವೋರ್ಸ್​ ಕೂಡ ಆಗಿತ್ತು ಅಂತಾ ಹೇಳಿದ್ದಾರೆ.

- Advertisement -

Related news

error: Content is protected !!