Sunday, June 28, 2026
spot_imgspot_img
spot_imgspot_img

ಬಂಟ್ವಾಳ: ರಾತ್ರೋ ರಾತ್ರಿ ಶ್ರೀಗಂಧದ ಮರವನ್ನು ಬುಡ ಸಮೇತ ಕಿತ್ತೊಯ್ದು ಪರಾರಿಯಾದ ಕಳ್ಳರು

- Advertisement -
- Advertisement -

ಬಂಟ್ವಾಳ: ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು ನಿವಾಸಿ ತನಿಯಪ್ಪ ಶೆಟ್ಟಿ ಅವರ ಪುತ್ರ ಸದಾಶಿವ ಶೆಟ್ಟಿರವರು ಜಮೀನಿನಲ್ಲಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳರು ರಾತೋರಾತ್ರಿ ಬುಡ ಸಮೇತ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾಶಿವ ಶೆಟ್ಟಿ ಅವರು ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಈ ಪೈಕಿ ಕಳೆದ 15 ವರ್ಷಗಳಿಂದ ಒಂದು ಶ್ರೀಗಂಧದ ಮರವನ್ನು ನೆಟ್ಟು ಬೆಳೆಸಿದ್ದರು. ಸೋಮವಾರ ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಕಳ್ಳರು ಜಮೀನಿಗೆ ಪ್ರವೇಶಿಸಿ ಶ್ರೀಗಂಧದ ಮರವನ್ನು ಬುಡ ಸಮೇತ ಕಡಿದು ಪರಾರಿಯಾಗಿದ್ದಾರೆ.

ಕಳವಾಗಿರುವ ಶ್ರೀಗಂಧದ ಮರದ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸದಾಶಿವ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!