- Advertisement -
- Advertisement -
ಉಡುಪಿ: ಕಾರನ್ನು ಬಾಡಿಗೆ ನೀಡುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ಫೇಕ್ ಲಿಂಕನ್ನು ಕಳುಹಿಸಿ ಲಕ್ಷಾಂತರ ರೂ. ಮೋಸ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಪಲ್ಲೋಬ್ ಬ್ಯಾನರ್ಜಿ ಎಂಬವರು ನ.7ರಂದು ಗೂಗಲ್‌ನಲ್ಲಿ ಕಾರ್ ರೆಂಟಲ್ಸ್ ಬಗ್ಗೆ ಹುಡುಕಾಟ ನಡೆಸುತಿದ್ದು, ಈ ವೇಳೆ ರೋಹಿತ್ ಶರ್ಮಾ ಎಂಬಾತ ಕರೆ ಮಾಡಿ 150ರೂ. ರಿಜಿಸ್ಟ್ರೇಷನ್ ಶುಲ್ಕ ಪಾವತಿಸಿ, ಟೋಕನ್ ಪಡೆದು ಕೊಳ್ಳುವಂತೆ ತಿಳಿಸಿದ್ದನು.
ಅದರಂತೆ ಆರೋಪಿ ಕಳುಹಿಸಿದ ಲಿಂಕ್‌ಗೆ ಮೇಲೆ ಕ್ಲಿಕ್ ಮಾಡಿ ಹಣ ಪಾವತಿ ಮಾಡಲು ಪ್ರಯತ್ನಪಟ್ಟಿದ್ದರೂ ಸಾಧ್ಯವಾ ಗಲಿಲ್ಲ. ಬಳಿಕ ಪಲ್ಲೋಬ್ ಬ್ಯಾನರ್ಜಿ ಖಾತೆಯಿಂದ ಒಟ್ಟು 4,15,056ರೂ. ಹಣ ಕಡಿತವಾಗಿರುವು ದಾಗಿ ಬ್ಯಾಂಕಿನಿಂದ ಸಂದೇಶ ಬಂದಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -