- Advertisement -
- Advertisement -


ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಅಂಗನವಾಡಿ ವಠಾರದಲ್ಲಿ ಸರಕಾರದ ಕೋವಿಡ್ ನಿಯಮ ಅನ್ವಯ ಸಾಂಕೇತಿಕವಾಗಿ 75ನೇ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮ ಜರುಗಿತು. ಶ್ರೀ ರಾಮಣ್ಣ ಗೌಡ ದೇವರಮನೆ (ವಕೀಲರು, ನೋಟರಿ) ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಈಶ್ವರ ಭಟ್ ಪೂರ್ಲಪ್ಪಾಡಿ, ಪಂಚಾಯತ್ ಸದಸ್ಯರಾದ ಜಯಂತ್ ಪೂರ್ಲಪ್ಪಾಡಿ, ಜಯಲಕ್ಷ್ಮಿ ಕೆ, ಅಂಗನವಾಡಿ ಕಾರ್ಯಕರ್ತೆ ಕಮಲ, ಪ್ರಮುಖರಾದ ಗಿರೀಶ್ ಪಿ ಆರ್, ವಿಜಯ ಪಿ, ಶೀಲಾವತಿ, ವಿಮಲ ಕೆ, ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘದ ಸದಸ್ಯೆಯರು, ಪ್ರೆಂಡ್ಸ್ ಪೂರ್ಲಪ್ಪಾಡಿ ಸದಸ್ಯರು ಉಪಸ್ಥಿತರಿದ್ದರು.



- Advertisement -








