Tuesday, June 16, 2026
spot_imgspot_img
spot_imgspot_img

ಕಬಕ: ಸ್ವಾತಂತ್ರ್ಯ ರಥಕ್ಕೆ ತಡೆಒಡ್ಡಿದ ಪ್ರಕರಣ: SDPI ಕಾರ್ಯಕರ್ತರ ಬಿಡುಗಡೆ

- Advertisement -
- Advertisement -

ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ‍್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಬಂಧಿತ ಮೂವರ ಬಿಡುಗಡೆ ನಡೆದಿದೆ.

ಕಬಕ ನಿವಾಸಿಗಳಾದ ಅಝೀಝ್, ಶಮೀರ್ ಮತ್ತು ಕುಡಿಪ್ಪಾಡಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರನ್ನು ಬಂಧಿಸಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ಬಗ್ಗೆ ಪಂಚಾಯತ್ ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿತ್ತು. ದೂರಿನಂತೆ ಪೊಲೀಸರು 7 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು ಇದೀಗ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ಪರವಾಗಿ ವಕೀಲರಾದ ಅಶ್ರಫ್ ಅಗ್ನಾಡಿ, ಮಜೀದ್ ಖಾನ್, ಅಬ್ದುಲ್ ರಹಿಮಾನ್, ಮುಸ್ತಫಾ ವಾದಿಸಿದ್ದರು.

- Advertisement -

Related news

error: Content is protected !!