- Advertisement -
- Advertisement -
ಬೆಂಗಳೂರು: ಪರ-ವಿರೋಧಗಳ ಮಧ್ಯೆಯೂ ಆ .23ರಿಂದ ಪ್ರಥಮ, ದ್ವಿತೀಯ ಪಿಯುಸಿ ಕಾಲೇಜು ಭೌತಿಕ ತರಗತಿಗಳು ಆರಂಭವಾಗುತ್ತಿವೆ. ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿದಂತೆ ಪಿಯುಸಿ ಇಲಾಖೆ ವತಿಯಿಂದ ಕೊರೊನಾ ಮಾರ್ಗಸೂಚಿ ಬಿಡುಗಡೆಯಾಗಿದೆ.
ಪಿಯುಸಿ ಕೊರೊನಾ ಮಾರ್ಗಸೂಚಿ ಪ್ರಮುಖ ಅಂಶಗಳು ಹೀಗಿವೆ..
- ಪಾಸಿಟಿವಿಟಿ ಶೇ. 2ಕ್ಕಿಂತ ಕಡಿಮೆ ಇರುವ ಪ್ರದೇಶದಲ್ಲಿ ಕಾಲೇಜು ಆರಂಭ ಮಾಡಬೇಕು.
- ವಾರದಲ್ಲಿ ಮೊದಲ ಮೂರು ದಿನ ಭೌತಿಕ ತರಗತಿಗಳು
- ಸೋಮವಾರ, ಮಂಗಳವಾರ, ಬುಧವಾರ ಭೌತಿಕ ತರಗತಿಗಳು ನಡೆಯಬೇಕು
- ತರಗತಿಗೆ ಹಾಜರಾಗದವರಿಗೆ ಅನ್ ಲೈನ್ ತರಗತಿ ನಡೆಸಬೇಕು.
- ಆನ್ ಲೈನ್ ತರಗತಿ ಹಾಜರಾದವರಿಗೆ ಉಳಿದ ಮೂರು ದಿನದಲ್ಲಿ(ಗುರುವಾರ, ಶುಕ್ರವಾರ, ಶನಿವಾರ ತರಗತಿ) ಭೌತಿಕ ತರಗತಿ ಇರಲಿ
- ಶೇ.50ರ ಅನುಪಾತದಲ್ಲಿ ಭೌತಿಕ ತರಗತಿಗಳು ನಡೆಯಬೇಕು.
- ವಾರದಲ್ಲಿ ಪ್ರತ್ಯೇಕ ಎರಡು ಬ್ಯಾಚ್ನಲ್ಲಿ ಮೂರು ದಿನ ಭೌತಿಕ ತರಗತಿಗಳು ನಡೆಯಬೇಕು
- ನೂರಕ್ಕಿಂತ ಕಡಿಮೆ ಇರುವ ಕಾಲೇಜಿನಲ್ಲಿ ವಾರಪೂರ್ತಿ ಭೌತಿಕ ತರಗತಿ ನಡೆಸಲು ಅನುಮತಿ ಇದೆ.
- ವಿಶಾಲವಾದ ಕೊಠಡಿಯಿರುವ ಕಾಲೇಜಿಗೆ ಅನುಮತಿ ನೀಡಲಾಗಿದೆ.
- ವಿದ್ಯಾರ್ಥಿ ಹಾಜರಾತಿ ಸ್ಥಳೀಯ ಪರಿಸ್ಥಿತಿ ಅನುಗುಣವಾಗಿ ಕಡ್ಡಾಯಗೊಳಿಸುವುದು
- ಕಾಲೇಜು ಆವರಣದಲ್ಲಿ ಗುಂಪು ಗೂಡುವಿಕೆ ಇರಬಾರದು, ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಕಡ್ಡಾಯ
- ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು
- ಭೌತಿಕ ತರಗತಿ ಹಾಜರಾದವರಿಗೆ ಆನ್ ಲೈನ್ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕು
- ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಚಟುವಟಿಕೆ ವೇಳೆ ಕೊವಿಡ್ ನಿಯಮ ಪಾಲಿಸಬೇಕು
- ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೊವಿಡ್ ಮಾರ್ಗಸೂಚಿ ಪಾಲಿಸಬೇಕು
- ಪ್ರತಿದಿನ ಕಾಲೇಜಿನ ಕೊಠಡಿ, ಕಾರಿಡಾರು ಸ್ಯಾನಿಟೈಸ್ ಮಾಡಬೇಕು
- ಕಾಲೇಜಿನಲ್ಲಿ ಸಂಗ್ರಹಿಸುವ ತ್ಯಾಜ್ಯ ಮೂರು ದಿನದೊಳಗೆ ವಿಲೇವಾರಿ ಮಾಡಬೇಕು
- ಅನಾರೋಗ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಕೂಡಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ
- ವಿದ್ಯಾರ್ಥಿಗಳು ತರಗತಿ & ಕಾಲೇಜು ಆವರಣದಲ್ಲಿ ಗುಂಪುಗೂಡಬಾರದು
- ಕನಿಷ್ಠ 6 ಅಡಿಗಳ ಭೌತಿಕ ಅಂತರದ ನಿಯಮವನ್ನ ಪಾಲಿಸುವುದು
- ಪದೇ ಪದೇ ಕೈಗಳನ್ನ ಸೋಪಿನಿಂದ ತೊಳೆಯಬೇಕು, ಸ್ಯಾನಿಟೈಸರ್ ಬಳಸಬೇಕು
- ತರಗತಿ ಆರಂಭಕ್ಕೂ ಮುನ್ನ ಹೈಪೋ ಕ್ಲೋರೈಡ್ದಿಂದ ಸ್ಯಾನಿಟೈಸ್ ಮಾಡಬೇಕು
- ಕೋವಿಡ್ ಸೋಂಕು ಇಲ್ಲದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ
- ಭೌತಿಕ ತರಗತಿ ಆಗದಿದ್ದರೆ, ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸೂಚನೆ
- ಉಪನ್ಯಾಸಕರಿಗೆ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
- ಪ್ರಾರ್ಥನೆ, ಕ್ರೀಡೆ & ಎಲ್ಲಾ ಚಟುವಟಿಕೆಗಳನ್ನ ಕೋವಿಡ್ ನಿಯಾಮವಳಿಗಳಿಂದ ನಡೆಸುವುದು
- ವಿದ್ಯಾರ್ಥಿಗಳಿಗೆ ಅವಶ್ಯವಿರುವ ಹೆಲ್ಪ್ಲೈನ್ ಹಾಗೂ ಆಸ್ಪತ್ರೆ ದೂರವಾಣಿ ನಂ. ಪ್ರಕಟಿಸುವುದು
- ಕಾಲೇಜಿನ ಆವರಣದಲ್ಲಿ ಸ್ವಿಮ್ಮಿಂಗ್ ಪೂಲ್ ಬಳಸದೇ ಸಂಪೂರ್ಣ ಮುಚ್ಚಬೇಕು
- 51 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಮಾಸ್ಕ್ ಜೊತೆಗೆ ಫೇಸ್ಗಾರ್ಡ್ ಬಳಸಲು ಸೂಚನೆ
- Advertisement -